ನಾಪೋಕ್ಲು: ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ನಮ್ಮ ನೆಚ್ಚಿನ ಶಾಸಕರಾದಂತಹ ಅಜ್ಜಿಕುಟ್ಟಿರ. ಎಸ್ ಪೊನ್ನಣ್ಣ ನವರ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿಸುತ್ತಾ, ಜನರ ದಾರಿ ತಪ್ಪಿಸುತ್ತಿರುವುದು ವಿಪರ್ಯಾಸ. ಇದನ್ನು ನಾಪೋಕ್ಲು ವಲಯ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ ಹೇಳಿದರು.
ಬೇತು ಗ್ರಾಮದ ದವಸ ಭಂಡಾರದಲ್ಲಿ ಮಂಗಳವಾರ ನಾಪೋಕ್ಲು ವಲಯ ಕಾಂಗ್ರೆಸಿನಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಸರ್ಕಾರದ ಅಧೀನದಲ್ಲಿ ನಡೆಯುವಂತಹ ಕಾಮಗಾರಿಗಳ ಸ್ಥಳವನ್ನು ಹಲವು ಬಾರಿ ಪರಿಶೀಲಿಸಿ, ಸರ್ವೆಯನ್ನು ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ಆದ ನಂತರ ಮಾತ್ರ ಜಾಗ ಹೆಸರಲ್ಲಿದೆಯೋ ಅಂದರೆ ಮಾತ್ರ ಸರಕಾರದಿಂದ ಅನುದಾನ ಬಿಡುಗಡೆಗೊಳ್ಳಲು ಸಾಧ್ಯ, ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಷಯ,. ಈಗ ನಮ್ಮ ಮೆಚ್ಚಿನ ಶಾಸಕರ ಮೇಲೆ ಮಾಡಿದಂತಹ ಆಪಾದನೆ ಸತ್ಯಕ್ಕೆ ದೂರವಾದಂತಹುದು ಏಕೆಂದರೆ ನೂತನ ಶಾದಿ ಮಾಲ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದಂತಹ ಜಾಗ ನಾಪೋಕ್ಲು ಜಮಾಹಿತಿಗೆ ಸಂಬಂಧಪಟ್ಟಂತಹ ಜಾಗ. ಸುಮಾರು 50 _55 ವರ್ಷಗಳ ಹಿಂದೆ ಅವರುಗಳ ಹೆಸರಿಗೆ ಖಾತೆ ವರ್ಗಾವಣೆ ಮಾಡಲಾಗಿದೆ . ಈ ಜಾಗದಲ್ಲಿ ಗೋರಿಗಳಿಗೆ, ಕಬಾರ್ ಸ್ಥಾನ ಅಲ್ಲೇ ಇದೆ. ಇದೆ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಅಂತಹ ತಡೆಗೋಡೆಗಳಿವೆ. ಸುಮಾರು 20 ವರ್ಷದಿಂದ ಇದ್ದಂತಹ ಶಾಸಕರ ಮುಂದಾಳತ್ವದಲ್ಲಿ ಅನುದಾನ ಬಿಡುಗಡೆಯಾಗಿದೆ. ಅನುದಾನದಿಂದ ಕಾಮಗಾರಿಗಳು ನಡೆದಿದೆ. ಇಷ್ಟೆಲ್ಲಾ ಮಾಜಿ ಶಾಸಕರ ಮುಂದಾಳತ್ವದಲ್ಲಿ ನಡೆದರೂ ಕೂಡ ನಮ್ಮ ಶಾಸಕರ ವಿರುದ್ಧ ಆಪಾದನೆ ಮಾಡುವುದು ಎಷ್ಟು ಸರಿ… ಈಗ ವಿಷಯ ಅದಲ್ಲ, ಸಾಮಾಜಿಕ ಜಾಲತಾಣದಲ್ಲಿ ಕೆಪಿಎಸ್ ಶಾಲೆಯ ಜಾಗ ಒತ್ತುವರಿಯಾಗಿದೆ ಎಂದು ವಿವರಣೆ ನೀಡಿ, ಅದನ್ನು ಶಾದಿ ಮಾಹಲ್ ಗೆ ನೀಡಲಾಗಿದೆ.
ಇದನ್ನು ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರಾದಂತಹ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ನವರು ಬಗೆಹರಿಸಿ ಕೊಡಬೇಕೆಂದು ಹೇಳಿಕೆ ನೀಡುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಏಕೆಂದರೆ 20 ವರ್ಷದಿಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ ಜಿ ಬೋಪಯ್ಯ ನವರೇ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು, ಪತ್ರಿಕಾಗೋಷ್ಠಿ ಮಾಡಿ ಆರೋಪ ಮಾಡಿದವರು ಅದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಅದೇ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಆ ಸಂದರ್ಭ ಇವರ ಗಮನಕ್ಕೆ ಬಂದಿಲ್ಲವೋ?? ಜಾಗ ಒತ್ತೂರಿಯಾಗಿ ಇರುವುದು ಆಡಳಿತ ಮಂಡಳಿಯವರ ನಿರ್ಲಕ್ಷದಿಂದ ಬೇರೆಯವರ ಪಾಲಾಯಿತು. ಏಕೆಂದರೆ ಇವರು ಹೇಳಿಕೆ ಕೊಟ್ಟ ಹಾಗೆ ಎರಡು ಮೂರು ಎಕರೆ ಕಾಲೇಜಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇರೆಯವರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ. ಇವರ ಅಧಿಕಾರಾವಧಿಯಲ್ಲಿ ಆ ಕಬರ್ ಸ್ಥಾನಗಳಿಗೆ ಸರ್ಕಾರದಿಂದ ತಡೆಗೋಡೆಗಳು ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇಷ್ಟೆಲ್ಲವೂ ಇವರ ಗಮನದಲ್ಲಿದ್ದರೂ…. ಇವರುಗಳು ಏನಕ್ಕೆ ಆಗ ಪ್ರತಿಭಟನೆ ಮಾಡಲಿಲ್ಲ.
ಇವರ ಅಧಿಕಾರ ಅವಧಿಯಲ್ಲಿ ಆ ಓತ್ತುವರಿಯನ್ನು ತೆರೆವುಗೊಳಿಸಿದ್ದರೆ ಸಮಸ್ಯೆಗಳು ಉದ್ಭವ ಆಗ್ತಿರಲಿಲ್ಲ. 20 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭ ಇವರದೇ ಶಾಸಕರಿದ್ದರು ಇವರದ್ದೇ ಸರ್ಕಾರ ಬಂದರೂ… ಶಾಲೆಯ ಆಡಳಿತ ಮಂಡಳಿಯಲ್ಲಿ ಎಲ್ಲಾ ಸದಸ್ಯರುಗಳು ಮಾಜಿ ಶಾಸಕರ ಅನುವಾಯಿಗಳಿದ್ದರೂ ಕೂಡ 20 ವರ್ಷದಿಂದ ಇದರ ಬಗ್ಗೆ ಪ್ರಸ್ತಾಪನೆ ಮಾಡದೆ… ಈಗ ಕಾಂಗ್ರೆಸ್ ಆಡಳಿತ ಬಂದ ಮೇಲೆ ಶಾಸಕರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡುವುದು ಎಷ್ಟು ಸರಿ ಎಂದು ಕಿಡಿ ಕಾರಿದರು.
ನಾಪೋಕ್ಲು ಪದವಿಪೂರ್ವ ಕಾಲೇಜಿಗೆ ನಮ್ಮ ಊರಿನ ಹಿರಿಯರು ಜಾಗವನ್ನು ದಾನ ಮಾಡಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ್ದಾರೆ. ನಮಗೂ ಒಂದು ಹೆಮ್ಮೆಯ ವಿಷಯ. ಈ ಜಾಗದ ಒತ್ತುವರಿಯನ್ನು ತೆರೆವುಗೊಳಿಸಲು ನಾವು ಕೂಡ ಹಳೆ ವಿದ್ಯಾರ್ಥಿಗಳಾಗಿರುವುದರಿಂದ ಯಾವ ಸಂದರ್ಭದಲ್ಲಿ ಇವರಿಗೆ ಸಹಕಾರ ನೀಡುತ್ತೇವೆ. ಅದು ಬೇರೆ ವಿಚಾರ.. ನಮಗೂ ನಮ್ಮ ಕಾಲೇಜಿನ ಮೇಲೆ ಅಪಾರ ಗೌರವವಿದೆ ಶಾಸಕರಿಗೂ ಕೂಡ ಕಾಳಜಿ ಇದೆ.. ಶಾಸಕರು ಕೂಡ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ತನಿಖೆಯನ್ನು ಮಾಡಲು ಆದೇಶ ನೀಡಿದ್ದಾರೆ. ಆದುದರಿಂದ ಶಾಸಕರಿ ವಿರುದ್ಧ ಅಪಪ್ರಚಾರ ಮಾಡಿ ಉತ್ತಮ ಕಾರ್ಯವನ್ನು ಮಾಡುವಂತಹ ಹಾಗೂ ಕೊಡಗಿನ ಅಭಿವೃದ್ಧಿಗೆ ಶ್ರಮಿಸಿದಂತಹ ಶಾಸಕರ ಶ್ರೇಯಸ್ಸನ್ನು ಕುಂಟಿತಗೊಳಿಸುವುದು ಶೋಭೆ ತರುವಂತದ್ದಲ್ಲ… ಇದಕ್ಕೆ ನಾವು ವಿರೋಧವನ್ನು ವ್ಯಕ್ತಪಡಿಸುತ್ತಾ, ಇನ್ನಾದರೂ ಶಾಸಕರ ಜೊತೆ ಕೈಜೋಡಿಸಿ ಕೊಡಗಿನ ಅಭಿವೃದ್ಧಿಗೆ ಶ್ರಮಿಸೋಣ ಎಂದರು .
ಈ ಸಂದರ್ಭ ಕುಲ್ಲೇಟಿರ ಅರುಣ್ ಬೇಬಾ ಮಾತನಾಡಿ ನಾಪೋಕ್ಲು ಪದವಿಪೂರ್ವ ಕಾಲೇಜಿಗೆ ನಮ್ಮ ಊರಿನ ಹಿರಿಯರು ಜಾಗವನ್ನು ದಾನ ಮಾಡಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ್ದಾರೆ. ನಾವು ಕೂಡ ಶಾಲೆಯ ಹಳೆ ವಿದ್ಯಾರ್ಥಿಗಳೇ. ಈ ಹಿಂದಿನ ಶಾಸಕರು ಜಾಗ ಒತ್ತುವರಿ ಸಮಸ್ಯೆ ಕುರಿತು ಪರಿಹಾರ ನೀಡದೆ ಇದೀಗ ಹಾಲಿ ಶಾಸಕರ ಮೇಲೆ ಆಪಾದನೆ ಹೊರಿಸುವುದು ಸೂಕ್ತವಲ್ಲ ಎಂದರು. ಮಾಜಿ ಸಚಿವ ದಿವಂಗತ ಎಂ.ಎಂ. ನಾಣಯ ಸ್ಥಳ ಅತಿಕ್ರಮಣ ಬಗ್ಗೆ ಮಾಹಿತಿ ನೀಡಿದಾಗ ನಾವು ಕೂಡ ಪ್ರತಿಭಟನೆ ನಡೆಸಿದ್ದೇವೆ. ಆಗ ಯಾರು ಸ್ಪಂದಿಸಲಿಲ್ಲ. ಹಾಗೇ ಇಲ್ಲದ ಕಾಳಜಿ ಈಗೇಕೆ ಎಂದರು. ನಮ್ಮ ಶಾಸಕರು ಜನಪರ ಕೆಲಸವನ್ನು ಮಾಡುತ್ತಿದ್ದು ಇದನ್ನು ಸಹಿಸದೆ ದುರುದ್ದೇಶದಿಂದ ತೇಜೋವಧೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿರೇಣುಕೇಶ್, ಕಾಳೆಯಂಡ ಸಾಬಾ ತಿಮ್ಮಯ್ಯ ಚೋಕಿರರೋಶನ್, ಬೊಳ್ಯಯಪಂಡ ಸುನಿತ, ಎ ಎಂ ಮಿಟ್ಟುಸೋಮಯ್ಯ ,ಪಾತಂಡ ಜಗದೀಶ್, ಚೋಕಿರ ಸುಧಿ ಅಪ್ಪಯ್ಯ, ಅಪ್ಪೇರಿಯಂಡ ವಿಷನ್ ಸೋಮಯ್ಯ, ಇದ್ದರು. .
✍️ ದುಗ್ಗಳ ಸದಾನಂದ



