ಕೊಡಗಿನ ಯುವ ಫುಟ್‌ಬಾಲ್ ಆಟಗಾರ ಆತ್ಮಹತ್ಯೆ

Football player

Share this post :

ಸುಂಟಿಕೊಪ್ಪ: ಕೊಡಗು (Kodagu) ಜಿಲ್ಲೆಯ ಉದಯೋನ್ಮುಖ ಯುವ ಫುಟ್ ಬಾಲ್ (Football) ಆಟಗಾರ(ಗೋಲ್ ಕೀಪರ್) ಕಿರಣ ಸುಂಟಿಕೊಪ್ಪದ ಬೆಟ್ಟಗೇರಿ ತೋಟದ ಲೈನ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ಪ್ರತಿಷ್ಠಿತ ಫುಟ್ ಬಾಲ್ ತಂಡಗಳಲ್ಲಿ ಗೋಲ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿರುವ ಕಿರಣ ಎಲ್ಲರ ಫೇವರೇಟ್ ಗೋಲ್ ಕೀಪರ್ ಆಗಿ ಹಲವು ಪ್ರಶಸ್ತಿಯನ್ನು ಜಯಿಸಿದ್ದಾನೆ.

coorg buzz
coorg buzz