ಸೈಂಟ್ ಆ್ಯನ್ಸ್ ಪದವಿ ಕಾಲೇಜು ಎನ್‌ಎಸ್‌ಎಸ್‌ ಶಿಬಿರ ಉದ್ಘಾಟನಾ ಕಾರ್ಯಕ್ರಮ

St Annes College Virajpet NSS Camp

Share this post :

ಯಾವುದೇ ಫಲಾಪೆಕ್ಷೆ ಇಲ್ಲದೆ ಮಾಡುವ ನಿಶ್ವಾರ್ಥ ಸೇವೆಯು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಂತ ಅನ್ನಮ್ಮ ಪದವಿ ಕಾಲೇಜು ವಿರಾಜಪೇಟೆ ಕೊಡಗು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ (NSS) ಘಟಕದ ವತಿಯಿಂದ ಬೇಟೋಳಿ ಗ್ರಾಮ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ 2024-25 ನೇ ಸಾಲೀನ ವಾರ್ಷಿಕ ಶಿಭಿರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಶಿಬಿರವನ್ನು ಹೂ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಹೇಶ್ ಗಣಪತಿ ಅವರು. ಪ್ರಸ್ತುತ ಸಮಾಜಕ್ಕೆ ಮೌಲ್ಯಾಧರಿತ ಸೇವೆಗಳ ಅವಶ್ಯಕತೆಯಿದೆ. ರೈತನು ಹೊಲದಲ್ಲಿ ದುಡಿದು. ಜನಸಮಾನ್ಯರ ಹಸಿವು ನೀಗಿಸುತ್ತಾನೆ. ಸೈನಿಕ ದೇಶದ ಗಡಿ ಕಾಯುತ್ತಾ ದೇಶವನು ಕಾಪಾಡುತ್ತಾನೆ. ಸಮಾಜದಲ್ಲಿ ಗುರುತಿಸಿಕೊಳ್ಳಲು ಉತ್ತಮ ನಾಯಕತ್ವ ಗುಣಗಳು, ಸೇವೆಗೆ ಮುಡಿಪಾಗಿಟ್ಟ ವ್ಯಕ್ತಿತ್ವದಿಂದ ಮಾತ್ರ ಸಾದ್ಯ. ವಿದ್ಯಾರ್ಥಿ ಜೀವನದಿಂದಲೇ ಸೇವಾ ಮನೋಭಾವ ಬೆಳಸಿಕೊಳ್ಳಬೇಕು. ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

St Annes College Virajpet NSS Camp

ಸಂತ ಅನ್ನಮ್ಮ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ. ಮುದಲೈ ಮುತ್ತು ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿ ಯಾಂತ್ರಿಕೃತ ಸಮಾಜದಲ್ಲಿ ಕೃತಕ ಬುದ್ದಿಮತೆ ಎಂಬುದು ಅನಿವಾರ್ಯವಾಗಿ ಪರಿಣಮಿಸಿದೆ. ಮನುಜ ನಡುವೆ ಸಂಬಂದಗಳಿಗೆ ಬೆಲೆ ಇಲ್ಲಾದಾಗಿದೆ. ಅದರೆ ಮನುಜನ ಪ್ರೀತಿ, ಸಹಬಾಳ್ವೆ ಇಲ್ಲದೆ ಹೋದಲ್ಲಿ ಯಾವುದೇ ಕಾರ್ಯಗಳು ವ್ಯರ್ಥವಾಗುತ್ತದೆ. ಒಡೆದ ಮನೆಯಲ್ಲಿ ಸಂಬಂದಗಳು ಗೌರವಯುತವಾಗಿತ್ತು. ಇದೀಗಾ ಅರಮನೆಯಂತಹ ಮನೆಯಿದ್ದರು ಸಂಬಂದಗಳು ಕಣ್ಮರೆಯಾಗಿದೆ. ಸಮಾಜದ ಉದ್ದಾರಕ್ಕಾಗಿ ಸಮಾಜದ ಒಳಿತಿಗಾಗಿ ಸೇವೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಬೇಕು. ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಬೇಟೋಳಿ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಅಚ್ಚಪಂಡ ಬೋಪಣ್ಣ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರುಗಳು ಮಾತನಾಡಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ದಿ ಸಮಿತಿ ಅದ್ಯಕ್ಷರಾದ ರಾಜೇಶ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

ಶಿಬಿರದ ಮೊದಲಿಗೆ ನಿವೃತ್ತ ಭೂಸೇನಾ ಅಧಿಕಾರಿಗಳಾದ ಭವಾನಿ ಶಂಕರ್ ಅವರು ಧ್ವಜರೋಹಣ ಗೈದು ಶಿಭಿರಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿಗಳಾದ ಸಜೇಶ್ ಭರತನ್, ಶಾಲಾ ಮುಖ್ಯೋಪದ್ಯಾಯರಾದ ಹೇಮಲತ, ಎನ್.ಎಸ್.ಎಸ್ ಅಧಿಕಾರಿ ಶಾಂತಿಭೂಷಣ್ ಉಪಸ್ಥಿತರಿದ್ದರು. ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಭಿರಾರ್ಥಿಗಳು, ಉಪನ್ಯಾಸಕರು,ಸ.ಹಿ.ಪ್ರಾ. ಶಾಲೆಯ ಶಿಕ್ಷಕರು, ಮತ್ತು ಗ್ರಾಮಸ್ಥರು ಹಾಜರಿದ್ದರು.