ಕಾರ್ತಿಕ ಮಾಸ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

Share this post :

ಮಡಿಕೇರಿ : ನಗರದ ಶ್ರೀ ಓಂಕಾರೇಶ್ವರ ದೇವಾಲಯ ವತಿಯಿಂದ ಕಾರ್ತಿಕ ಮಾಸದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಉತ್ಸವಾದಿಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ.
ಅಕ್ಟೋಬರ್ ೨೨ ರಂದು ಸಂಜೆ ೬ ಗಂಟೆಗೆ ಗೋಪೂಜೆ ನಡೆಯಲಿದೆ. ಅಕ್ಟೋಬರ್ ೨೨ ರಿಂದ ನವೆಂಬರ್ ೨ ರವರೆಗೆ ೧೨ ದಿನಗಳ ಕಾಲ ಸಂಜೆ ೬.೩೦ ಗಂಟೆಯಿಂದ ತುಳಸಿ ಪೂಜೆ ನಡೆಯಲಿದ್ದು, ತುಳಸಿ ಪೂಜೆ ಮಾಡಿಸ ಬಯಸುವ ಭಕ್ತಾದಿಗಳು ೧೦೦ ಸೇವಾ ದರ ಪಾವತಿಸಿ, ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರವಾಗಿಬೇಕಾಗಿ ಕೋರಿದ್ದಾರೆ.
ನವೆಂಬರ್ ೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ತುಳಸಿ ಕಲ್ಪೋಕ ಪೂಜೆ ನಡೆಯಲಿದೆ. ನವೆಂಬರ್ ೫ ರಂದು ಸಂಜೆ ೬ ಗಂಟೆಗೆ ಮಹಾಪೂಜೆ ನಡೆಯಲಿದೆ. ಜೊತೆಗೆ ಸಂಜೆ ೬.೩೦ ಗಂಟೆಗೆ ತೆಪ್ಪೋತ್ಸವ, ದಟ್ಟೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ.
ಕಾರ್ತಿಕ ಹುಣ್ಣಿಮೆಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಪೂಜೆ ನಂತರ ಸಂಜೆ ೬:೩೦ ಗಂಟೆಗೆ ದೇವಸ್ಥಾನದ ವತಿಯಿಂದ ತೆಪ್ಪೋತ್ಸವ ನಡೆಯಲಿದ್ದು, ತೆಪ್ಪೋತ್ಸವಕ್ಕೆ ಸೇವೆ ನೀಡಲು ಬಯಸುವ ಭಕ್ತರು ರೂ.೧೦ ಸಾವಿರ ಸೇವಾ ದರ ಪಾವತಿಸಿ ಸಂಕಲ್ಪ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ೯೪೪೮೮೯೯೫೬೭ ಅನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

coorg buzz
coorg buzz