ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಪ್ರಮುಖ ಎಂಪಿವಿಯಾಗಿದ್ದು, ಇದು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ದೊಡ್ಡ ಕುಟುಂಬಗಳಿಗೂ ಹೆಚ್ಚು ಸೂಕ್ತವಾಗಿದ ಈ ಕಾರು ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು – ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲೂ ಇದೇ ಎರ್ಟಿಗಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ 14,151 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ
ಜೂನ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ (15,786 ಯುನಿಟ್), ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ ಡಿಜೈರ್ (15,484 ಯುನಿಟ್) ಹಾಗೂ ಮೂರನೇ ಸ್ಥಾನದಲ್ಲಿ ಮಾರುತಿ ಬ್ರೆಝಾ (14,507 ಯುನಿಟ್) ಇದೆ. ಈ ವರ್ಷದ ಮೊದಲ 5 ತಿಂಗಳಲ್ಲೂ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿಯೇ ಮಾರಾಟಗೊಂಡಿದೆ. ಮೇನಲ್ಲಿ 16,140 ಯುನಿಟ್, ಏಪ್ರಿಲ್‌ನಲ್ಲಿ 15,780 ಯುನಿಟ್, ಮಾರ್ಚ್‌ನಲ್ಲಿ 16,804 ಯುನಿಟ್ ಹಾಗೂ ಫೆಬ್ರವರಿಯಲ್ಲಿ 14,868 ಯುನಿಟ್ ಹಾಗೂ ಜನವರಿ ತಿಂಗಳಲ್ಲಿ 14,248 ಯುನಿಟ್‌ಗಳನ್ನು ಮಾರಲಾಗಿದೆ.
ಮಾರುತಿ ಸುಜುಕಿ ಎರ್ಟಿಗಾ ಬೆಲೆಯು ರೂ.8.96 ಲಕ್ಷ ಹಾಗೂ ಗರಿಷ್ಠ ರೂ.13.25 ಲಕ್ಷ (ಎಕ್ಸ್-ಶೋರೂಂ) ಆಗಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ನೂತನ ಎರ್ಟಿಗಾ ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರನ್ನು ಸೆಳೆಯುತ್ತದೆ. ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.
ಎರ್ಟಿಗಾ ಕಾರು 4,395 ಎಂಎಂ ಉದ್ದ, 1,735 ಅಗಲ ಹಾಗೂ 1,690 ಎಂಎಂ ಎತ್ತರವು ಇದೆ. ಜೊತೆಗೆ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,740 ವೀಲ್‌ಬೇಸ್‌ನ್ನು ಪಡೆದಿದೆ. ಇನ್ನು 209 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. 45 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಹೊಸ ಎರ್ಟಿಗಾ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದ್ದು, 1.5-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 20.3 ರಿಂದ 26.11 ಕಿ.ಮೀ ಮೈಲೇಜ್ ನೀಡುತ್ತದೆ.
ಇದು ಅತ್ಯುತ್ತಮವಾದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸುತ್ತದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪ್ಯಾಡಲ್ ಶಿಫ್ಟರ್ಸ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.
ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ – ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.