ಜೂನ್ 9 ರಂದು ಸಂಜೆ ವೇಳೆಗೆ ಸೋಣಂಗೇರಿ ಸಮೀಪದ ಆರ್ತಾಜೆ ಬಳಿ KSRTC ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿಯ ಡಾ. ಶಮಂತ್ ಚಿಕಿತ್ಸೆ ಫಲಿಸದೆ ನಿನ್ನೆಯ ದಿನ (ಜುಲೈ 3)ನಿಧನರಾಗಿದ್ದಾರೆ.
ಡಾ ಶಮಂತ್ ಕಲ್ಲುಗುಂಡಿಯ ಖ್ಯಾತ ವೈದ್ಯರಾದ ಡಾ ಶ್ಯಾಮ್ ಪ್ರಸಾದ್ ಭಟ್ ರವರ ಪುತ್ರ. ದುಗ್ಗಲಡ್ಕದಲ್ಲಿ ಕ್ಲಿನಿಕ್ ನಲ್ಲಿ ವೈದ್ಯರಾಗಿ (Doctor) ಕರ್ತವ್ಯ ನಿರ್ವಹಿಸುತ್ತಿದ್ದರು.