ಉದ್ಯೋಗಾವಕಾಶ: ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

Job opportunity

Share this post :

ಪ್ರಸಕ್ತ(2025-26) ಶೈಕ್ಷಣಿಕ ವರ್ಷದಿಂದ ನೂತನವಾಗಿ ಪ್ರಾರಂಭವಾಗುವ 60 ಸಂಖ್ಯಾ ಬಲದ ಮೌಲಾನಾ ಆಜಾದ್ ಮಾದರಿ ಶಾಲೆ ಮಡಿಕೇರಿ, ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ, ಇಲ್ಲಿನ ಶಾಲಾ ವಿಭಾಗಕ್ಕೆ ಅತಿಥಿ ಶಿಕ್ಷಕರ ಸೇವೆಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ, 31 ಕೊನೆಯ ದಿನವಾಗಿದೆ. ಮೌಲಾನಾ ಆಜಾದ್ ಮಾದರಿ ಶಾಲೆ ಮಡಿಕೇರಿ, ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ ಇಲ್ಲಿನ ಖಾಲಿ ಹುದ್ದೆಗಳು ಇದ್ದು, ಕನ್ನಡ ಭಾಷಾ ಶಿಕ್ಷಕರು ವಿದ್ಯಾರ್ಹತೆ ಬಿ.ಎ. ಮತ್ತು ಬಿ.ಎಡ್ (ಕನ್ನಡ) ಹುದ್ದೆಯ ಸಂಖ್ಯೆ-1, ಆಂಗ್ಲ ಭಾಷಾ ಶಿಕ್ಷಕರು- ಬಿ.ಎ ಮತ್ತು ಬಿ.ಎಡ್ (ಇಂಗ್ಲೀಷ್)-1, ಉರ್ದು/ ಹಿಂದಿ ಭಾಷಾ ಶಿಕ್ಷಕರು-ಬಿ.ಎ ಮತ್ತು ಬಿ.ಎಡ್-1, ಗಣಿತ ಭಾಷಾ ಶಿಕ್ಷಕರು- ಬಿ.ಎಸ್ಸಿ ಮತ್ತು ಬಿ.ಎಡ್-1, ವಿಜ್ಞಾನ ಭಾಷಾ ಶಿಕ್ಷಕರು- ಬಿ.ಎಸ್ಸಿ ಮತ್ತು ಬಿ.ಎಡ್-1, ಸಮಾಜ ವಿಜ್ಞಾನ ಭಾಷಾ ಶಿಕ್ಷಕರು- ಬಿ.ಎ ಮತ್ತು ಬಿ.ಎಡ್ -1
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ ಕಾಲೇಜು ಹತ್ತಿರ, ಮಡಿಕೇರಿ, ಕಚೇರಿ ದೂರವಾಣಿ ಸಂಖ್ಯೆ 08272-225528, 9686138688, 9972799091 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

coorg buzz
coorg buzz