ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಗ್ರಾಹಕರಿಗಾಗಿ ಸೂಪರ್‌ “ಮ್ಯಾಕ್ಸ್‌ಸೇವರ್‌” ಕೊಡುಗೆ ಘೋಷಣೆ

Swiggy

Share this post :

coorg buzz

ತ್ವರಿತ ಇ-ಕಾಮರ್ಸ್‌ ತಾಣವಾದ ಸ್ವಿಗ್ಗಿ (Swiggy) ಇನ್‌ಸ್ಟಾಮಾರ್ಟ್‌ ತನ್ನ ಗ್ರಾಹಕರಿಗಾಗಿ “ಮ್ಯಾಕ್ಸ್‌ಸೇವರ್‌” ಎಂಬ ವಿನೂತನ ಸೇವೆ ಆರಂಭಿಸಿದ್ದು, ತಮ್ಮ ಪ್ರತಿ ಆರ್ಡರ್‌ಗಳ ಮೇಲೆ 500 ರೂ.ವರೆಗೂ ಉಳಿತಾಯ ಮಾಡಬಹುದು. ಇತ್ತೀಚೆಗೆ ರಾಷ್ಟ್ರದಾದ್ಯಂತ 100 ನಗರಗಳಿಗೆ ವಿಸ್ತರಣೆಯನ್ನು ಘೋಷಿಸಿದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಈ ನಗರಗಳಲ್ಲಿನ ಬಳಕೆದಾರರಿಗೆ ಮ್ಯಾಕ್ಸ್‌ಸೇವರ್ ಅನ್ನು ಪ್ರಾರಂಭಿಸಿದೆ.

ಸ್ವಿಗ್ಗಿ ಮ್ಯಾಕ್ಸ್‌ಸೇವರ್‌ ಬಳಸುವ ಗ್ರಾಹಕರು ಎಲ್ಲಾ ವಿಭಾಗದಲ್ಲೂ ಉತ್ತಮ ಡಿಸ್ಕೌಂಟ್‌ ಪಡೆಯಬಹುದು. ಅದರಲ್ಲೂಪ್ರತಿನಿತ್ಯ ಬಳಕೆಯ ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌, ಫ್ಯಾಷನ್, ಮೇಕಪ್, ಆಟಿಕೆಗಳು ಸೇರಿದಂತೆ 35,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡೆರಿವರಿ ಮಾಡುತ್ತಿದೆ.

ಈ ಕುರಿತು ಮಾತನಾಡಿದ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, “ಹೆಚ್ಚಿನ ಬಳಕೆದಾರರು ತ್ವರಿತವಾಗಿ ಪದಾರ್ಥಗಳನ್ನು ಪಡೆಯಲು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನನ್ನು ಬಳಸುತ್ತಿದ್ದಾರೆ. ನಮ್ಮ ಗ್ರಾಹಕರಿಗೆ ಇನ್ನಷ್ಟು ಉತ್ತಮ ಕೊಡುಗೆ ನೀಡಲು ಇದೀಗ ಸೂಪರ್‌ ಮ್ಯಾಕ್ಸ್‌ಸೇವರ್‌ ಆರಂಭಿಸಲಾಗಿದೆ ಎಂದರು. ಸೂಪರ್‌ ಮ್ಯಾಕ್ಸ್‌ಸೇವರ್‌ ಆಪ್ಷನ್‌ ನಿಮ್ಮ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಟಾಪ್‌ಅಪ್‌ ಆಗಿರಲಿದ್ದು, ಪ್ರತೇಕವಾಗಿ ಆಯ್ಕೆ ಮಾಡುವ ಅವಶ್ಯಕತೆ ಇಲ್ಲ. ಮೊದಲ ಬಳಕೆದಾರರು ಪದಾರ್ಥಗಳ ಟೋಟಲ್‌ನಲ್ಲಿ ಲಭ್ಯವಿರಲಿದೆ. ಇನ್ನು, ಸ್ವಿಗ್ಗಿ ಪ್ರೀಮಿಯಂ ಸದಸ್ಯರಿಗೆ ಮ್ಯಾಕ್ಸ್‌ಸೇವರ್‌ನ ಅತಿಹೆಚ್ಚು ಪ್ರಯೋಜನ ಸಿಗಲಿದೆ, ಈ ನೂತನ ಕೊಡುಗೆ ಮೂಲಕ ಗ್ರಾಹಕರು 10 ನಿಮಿಷಗಳಲ್ಲೇ ನಿಮಗೆ ಬೇಕಾದ ಪದಾರ್ಥಗಳನ್ನು ಪಡೆದುಕೊಳ್ಳಿ.