ವಿಶೇಷ ಕಾರ್ಯಕ್ರಮದ ಮೂಲಕ ಅನಾಥ ಹೆಣ್ಣು ಮಕ್ಕಳಿಗೆ ನೆರವು

special program

Share this post :

coorg buzz

ಬೆಂಗಳೂರು: ನೆಲೆ ಫೌಂಡೇಶನ್ನಲ್ಲಿ ನೆಲೆಸಿರುವ 50 ಹೆಣ್ಣು ಮಕ್ಕಳಿಗೆ (Girls) ನೆರವಾಗುವ ನಿಟ್ಟಿನಲ್ಲಿ ವಿಜಯನಗರದ ಕಾಸಿಯಾ ಭವನದಲ್ಲಿ ಶೈನಿಂಗ್ ಸ್ಟಾರ್ಸ್ ವಿಶೇಷ ಕಾರ್ಯಕ್ರಮವನ್ನು (program) ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಫ್ಯಾಷನ್ ಶೋ, ತಾಯಿ ಮಗುವಿನ ರ್ಯಾಂಪ್ ವಾಕ್, ಮಹಿಳೆಯರ ವಿಭಿನ್ನ ರೀತಿಯ ಸ್ಯಾರಿ ರ್ಯಾಂಪ್ ವಾಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಸಂಗ್ರಹವಾಗುವ ಹಣವನ್ನು ಫೌಂಡೇಶನ್ ಗೆ ನೀಡಲಾಗುತ್ತದೆ.

ಅನ್ಷುಲಾ ಲೇಡೀಸ್ ಎಂಟ್ರಿಪ್ರಿನರ್ ಕ್ಲಬ್ ಮತ್ತು ಮಧುರಾ ವುಮೆನ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಮಹಿಳೆಯರು ಮತ್ತು ಮಕ್ಕಳು ಧರಿಸಿದ್ದ ವಿಭಿನ್ನ ಶೈಲಿಯ ಉಡುಪುಗಳನ್ನು ನೋಡುಗರನ್ನು ಆರ್ಕಷಿಸುವಂತಿತ್ತು.

ರಂಗು ರಂಗಿನ ಸೀರೆಯಲ್ಲಿ ನಾರಿಯರು ವೇದಿಕೆ ಮೇಲೆ ಕಂಗೊಳಿಸಿದರು. ಅತ್ಯುತ್ತಮವಾಗಿ ಸೀರೆಯುಟ್ಟು ರ್ಯಾಂಪ್ ವಾಕ್ ಮಾಡಿದ ಮಹಿಳೆಯರಿಗೆ ಹಾಗೂ ತಾಯಿ ಮಕ್ಕಳ ರ್ಯಾಂಪ್ ವಾಕ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಲ್ಲಿ ವಿಜೇತರನ್ನು ಘೋಷಿಸಿ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೀಡಿಯಾ ಕನೆಕ್ಟ್ ಹಾಗೂ ಸುದಯ ಫೌಂಡೇಶನ್ ಸಂಸ್ಥಾಪಕರಾದ ದಿವ್ಯಾ ರಂಗೇನಹಳ್ಳಿ, ಶರಣ್ಯ ಬಿಲ್ಲ, ಉಷಾ ಎಸ್, ಚಂದನ, ಪ್ರೀತಿ ಪೊಬ್ಬತ್ತಿ, ಜ್ಯೋತಿ ಪ್ರಸಾದ್ ಪಾಲ್ಗೊಂಡಿದ್ದರು. ಈ ಶೈನಿಂಗ್ ಸ್ಟಾರ್ ಕಾರ್ಯಕ್ರಮವನ್ನು ಲಕ್ಷ್ಮಿ ಸಿ.ಪಿ, ಮಂಜುಳಾ ಶಂಕರ್ ಮತ್ತು ಅನ್ಷು ಹೆಗ್ಡೆ ಅವರು ಆಯೋಜಿಸಿದ್ದರು.