ಎನ್‌ಸಿಸಿಯಲ್ಲಿ C ಪ್ರಮಾಣ ಪತ್ರ ಪಡೆದಿರುವ ಯುವತಿಯರಿಗೆ ʼಅಕ್ಕ ಪಡೆʼ ಸೇರಲು ಅವಕಾಶ..!

Share this post :

ಮಡಿಕೇರಿ : ಜಿಲ್ಲೆಯಲ್ಲಿ ೨೦೨೫-೨೬ ನೇ ಸಾಲಿನ “ಅಕ್ಕ ಪಡೆ” ಯೋಜನೆ ಅನುಷ್ಠಾನಗೊಳಿಸಲು ಎನ್‌ಸಿಸಿಯಲ್ಲಿ ಪ್ರಮಾಣ ಪತ್ರ ಪಡೆದಿರುವ ಮಹಿಳಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಯಮಗಳು ಹಾಗೂ ಆಯ್ಕೆಯ ಮಾನದಂಡಗಳಿಗೆ ಒಳಪಟ್ಟು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಜಿಲ್ಲೆಯಲ್ಲಿ ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಪ್ರಾಥಮಿಕ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ “ಅಕ್ಕ ಪಡೆ” ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಎನ್‌ಸಿಸಿಯಲ್ಲಿ ಸಿ ಪ್ರಮಾಣಪತ್ರ ಪಡೆದಿರುವ ದೈಹಿಕ ಸದೃಢತೆ ಹೊಂದಿರುವ, ಉತ್ತಮ ನಡವಳಿಕೆ, ಸಂವಹನ ಕಲೆ, ಕಾರ್ಯ ದಕ್ಷತೆ ಉಳ್ಳ ಮತ್ತು ಪಾಳಿಗಳಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರುವ ೩೫ ರಿಂದ ೪೫ ವರ್ಷ ಒಳಗಿರುವ ೫ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಈ ಹುದ್ದೆಯ ಗುತ್ತಿಗೆ ಅವಧಿ ೧೧ ತಿಂಗಳಿಗೆ ಸೀಮಿತವಾಗಿದೆ ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ ೧೪ ರ ಸಂಜೆ ೫ ಗಂಟೆಯೊಳಗೆ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ೦೮೨೭೨ ೨೨೮೦೧೦ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‌ಗೇಟ್, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಕಚೇರಿಯನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

coorg buzz
coorg buzz