ರಕ್ಷಿತಾ ಶೆಟ್ಟಿಯನ್ನು ನಿಂದಿಸಿದ ಅಶ್ವಿನಿ ಗೌಡ ವಿರುದ್ಧ ದಾಖಲಾಯ್ತು ಕೇಸ್..!‌ – ಇಲ್ಲಿದೆ ಮಾಹಿತಿ

Share this post :

ಬೆಂಗಳೂರು : ಬಿಗ್‌ಬಾಸ್‌ ಕನ್ನಡ ಸೀಸನ್‌ 12 ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ವಾರದ ಹಿಂದಷ್ಟೇ ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವಿನ ಗಲಾಟೆಯ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ರಾಜ್ಯಾದ್ಯಂತ ಬಿಗ್‌ಬಾಸ್‌ ವೀಕ್ಷಕರು ರಕ್ಷಿತಾ ವಿರುದ್ಧ ಮುಗಿಬಿದ್ದ ಜಾಹ್ನವಿ ಹಾಗೂ ಅಶ್ವಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಾದ ನಂತರ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್‌ ಕೂಡಾ ಆ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ರಕ್ಷಿತಾ ಬಳಿ ಅಶ್ವಿನಿ ಕ್ಷಮೆಯನ್ನೂ ಕೇಳಿದ್ದರು. ಇದೀಗ ಹೊಸ ವಿಷಯ ಏನೆಂದರೆ ರಕ್ಷಿತಾಳನ್ನು ನಿಂದಿಸಿದ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ಬಿಡದಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವಕೀಲ ಪ್ರಶಾಂತ್ ಮೆಹ್ತಾಲ್ ಎಂಬುವರು ದೂರು ದಾಖಲಿಸಿದವರು.
ಕಳೆದ ವಾರದ ಎಪಿಸೋಡ್‌ ಒಂದರಲ್ಲಿ ರಕ್ಷಿತಾ ಬಗ್ಗೆ ಸ್ಪರ್ಧಿಯೊಬ್ಬರ ಜೊತೆ ಮಾತನಾಡುತ್ತಾ ರಕ್ಷಿತಾ ಶೆಟ್ಟಿ ಬಗ್ಗೆ ಉಲ್ಲೇಖಿಸುತ್ತಾ ʼ ಶೀ ಇಸ್‌ ಎ ಎಸ್‌ʼ ಅಂತ ಹೇಳಿದ್ದರು. ಅದರ ವಿರುದ್ಧ ಈಗ ದೂರು ದಾಖಲಾಗಿದೆ. ಬಿಗ್‌ಬಾಸ್‌ನ ಬ್ಯುಸಿನೆಸ್‌ ಹೆಡ್‌ ಅನ್ನೂ ದೂರಿನಲ್ಲಿ ಉಲ್ಲೇಕಿಸಲಾಗಿದೆ. ಅಶ್ವಿನಿ ಗೌಡ ಹಾಗೂ ಬಿಗ್​​ಬಾಸ್​​ಗೆ ಸಂಬಂಧಿಸಿದ ಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್‌ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

coorg buzz
coorg buzz