ಮಡಿಕೇರಿ : ತೊಂಬತ್ತುಮನೆ ಅಂಗನವಾಡಿ ಕಾರ್ಯಕರ್ತೆಯಾಗಿ 36 ವರ್ಷ ಕಾರ್ಯನಿರ್ವಹಿಸಿದ ಅಮ್ಮಚಳಿಯಂಡ ಎಂ.ಬಿ. ಶೀಲಾವತಿ ಅವರು ಇತ್ತೀಚೆಗೆ ನಿವೃತ್ತರಾದರು. ಇವರನ್ನು ಇಲಾಖೆ ಹಾಗೂ ಸಹೋದ್ಯೋಗಿ ಮಿತ್ರರು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರ್ನಾಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಶೀಲಾವತಿ ಅವರನ್ನು ಗೌರವಿಸಿದರು.






