ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಧಿಕಾರಿಗಳ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕೊಡಗು ಧರ್ಮಸ್ಥಳ ಭಕ್ತಾಭಿಮಾನಿ ಬಳಗ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ 300ಕ್ಕೂ ಹೆಚ್ಚು ಪ್ರತಿಭಟನಾಕಾರಾರು ಅಶಾಂತಿ ಮೂಡಿಸುತ್ತಿರುವ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಶಾಂತಿ ಮೂಡಿಸುತ್ತಿರುವ ಬಳಿ ಹಲವು ಸಾಕ್ಷಿಗಳು ಇದೆ ಎಂದು ಸಾರುತ್ತಿರುವವರ ಮನೆ, ಕಛೇರಿ ಗಳನ್ನು ತನಿಖೆ ಮಾಡಬೇಕು,ಈಗಿರುವ ತನಿಖಾ ತಂಡ ಎಸ್ ಐ ಟಿ ಇನ್ನಷ್ಟು ಬಲಗೊಳ್ಳಬೇಕು ಎಂದು ಒತ್ತಾಸಿದರು.



