ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ..!

Share this post :

ಮಡಿಕೇರಿ : ವಿದ್ಯುತ್ ತಗಲಿ ಯುವಕನೋರ್ವ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ.
H.P. ಪ್ರತೀಪ್(32) ಮೃತ ಯುವಕ. ಇಂದು ಸಂಜೆ ಮನೆ ಬಳಿಯ ವಿದ್ಯುತ್ ಕಂಬವೇರಿ ದುರಸ್ತಿಗೆ ಮುಂದಾಗಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಕಂಬದಲ್ಲೇ ಪ್ರತೀಪ್ ಕೊನೆಯುಸಿರೆಳೆದಿದ್ದಾನೆ. ಮೃತದೇಹವನ್ನು ಮಡಿಕೇರಿ ಶವಾಗಾರಕ್ಕೆ ರವಾನಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

coorg buzz
coorg buzz