ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ರಾಮನವಮಿ, ವಾರ್ಷಿಕ ಮಹಾಸಭೆ ಮಾ.26ಕ್ಕೆ

ಮಡಿಕೇರಿ : ಶ್ರೀ ವಿನಾಯಕ ಸೇವಾ ಟ್ರಸ್ಟ್‌ ಕತ್ತಲೆಕಾಡು-ಜೇನುಕೊಲ್ಲಿ ವತಿಯಿಂದ ಶ್ರೀರಾಮನವಮಿ ಆಚರಣೆ ಹಾಗೂ ಟ್ರಸ್ಟ್‌ನ 2025-26 ವಾರ್ಷಿಕ ಮಹಾಸಭೆ ಮಾರ್ಚ್‌ 26ರಂದು ನಡೆಯಲಿದೆ. ಟ್ರಸ್ಟ್‌ಗೆ ನೂತನವಾಗಿ ಖರೀದಿಸಿರುವ ಜಾಗದ ಆವರಣದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್ ತಂತ್ರಿ ಅವರ ನೇತೃತ್ವದಲ್ಲಿ ಗಣಹೋಮ, ಬಳಿಕ ದುರ್ಗಾ ಹೋಮ, 11 ಗಂಟೆಗೆ ಶ್ರೀರಾಮನವಿ ಪ್ರಯುಕ್ತ ವಿಶೇಷ ಪೂಜೆ, ಶ್ರೀರಾಮನಿಗೆ ಆರತಿ ನೆರವೇರಲಿದೆ. ನಂತರ ಟ್ರಸ್ಟ್‌ನ ಭಜನಾ ತಂಡದಿಂದ ಭಜನೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ […]