ಡೊನೇಟರ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ 11ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ

Share this post :

ಬಡವರ ಬೆಳಕಾಗಿ ಜನಸೇವೆಗೆಂದೇ ಹೆಸರುವಾಸಿಯಾಗಿರುವ ವಿರಾಜಪೇಟೆಯ (virajpet)  ಡೊನೇಟರ್ಸ್ ಚಾರಿಟಬಲ್ ಟ್ರಸ್ಟ್  ಕಳೆದ 10 ವರ್ಷದಿಂದ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಜನಸೇವೆ ಮಾಡುತ್ತಾ ಬಂದಿದೆ.

ಇದರ ಭಾಗವಾಗಿ 11ನೇ ವರ್ಷದ ಕಾರ್ಯಕ್ರಮದ ಹಿನ್ನಲೆ ವಿರಾಜಪೇಟೆಯ ವಿವಿಧ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ವಿರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯಿತು.

ಹಾಗೆಯೇ ವಿರಾಜಪೇಟೆಯ ಆರ್ಜಿಯಲ್ಲಿರುವ ಉರ್ದು ಶಾಲೆ ಹೆಗ್ಗಳ , ಚಿಟ್ಟಡೆ ಮತ್ತು ದೇವಣಗೇರಿ ಶಾಲೆಗಳ 450ಕ್ಕೂ ಹೆಚ್ಚು ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೂ ಟ್ರಸ್ಟಿನ ವತಿಯಿಂದ ಉಚಿತ ನೋಟು ಪುಸ್ತಕ ವಿತರಿಸಿದರು.