ಮಡಿಕೇರಿ : ನಿನ್ನೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಹುಲಿತಾಳದ ಯುವಕ ಹೆಚ್.ಪಿ.ಪ್ರತೀಪ್ ಕುಟುಂಬಸ್ಥರನ್ನು ಶಾಸಕ ಡಾ. ಮಂತರ್ ಗೌಡ (Mantar Gowda) ಭೇಟಿಯಾಗಿ ಸಾಂತ್ವನ ಹೇಳಿದರು.
ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಮಂತರ್ ಗೌಡ ಘಟನೆಯ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆದರು. ನಿನ್ನೆ ಮನೆಯ ಬಳಿ ವಿದ್ಯುತ್ ಕಂಬ ಏರಿ ದುರಸ್ಥಿ ವೇಳೆ ವಿದ್ಯುತ್ ತಗಲಿ ಪ್ರತೀಪ್ ಮೃತಪಟ್ಟಿದ್ದರು.