ಮಡಿಕೇರಿ : ಕೊಡಗು ಜಿಲ್ಲಾ ಬಂಟರ ಸಂಘಕ್ಕೆ ಸೇರಿದ ಜಾಗದಲ್ಲಿ ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಶ್ರಮದಾನ ಮಾಡಲಾಯಿತು.
ಹೆಸರಾಂತ ಉದ್ಯಮಿ ಡಾ ಪ್ರೇಮನಾಥ್ ಪೂಂಜಾ ಅವರು ಮಡಿಕೇರಿ ಹೊರವಲಯದ ಅಬ್ಬಿಫಾಲ್ಸ್ ಮಾರ್ಗದಲ್ಲಿರುವ ತಮ್ಮ ಜಮೀನಿನಲ್ಲಿ ಅರ್ಧ ಎಕ್ರೆ ಜಾಗವನ್ನು ಬಂಟರ ಭವನ ನಿರ್ಮಾಣಕ್ಕಾಗಿ ನೀಡಿದ್ದರು. ಹಲವು ವರ್ಷಗಳಿಂದ ಅದು ಪಾಳು ಬಿದ್ದಿತ್ತು. ಇದೀಗ ಜಿಲ್ಲಾ ಬಂಟರ ಸಂಘದ ವತಿಯಿಂದ ಬಂಟರ ಭವನ ಟ್ರಸ್ಟ್ ಸಹಯೋಗದಲ್ಲಿ ಅಲ್ಲಿ ಭವನ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ಆ ಜಾಗದಲ್ಲಿ ಬೆಳೆದಿದ್ದ ಕುರುಚಲು ಗಿಡಗಳನ್ನು ಯುವ ಬಂಟ್ಸ್ ನೇತೃತ್ವದಲ್ಲಿ ತೆರವು ಮಾಡಲಾಯಿತು. ಜೊತೆಗೆ ಸ್ಟೋನ್ ಹಿಲ್ನಲ್ಲಿರುವ ಬಂಟರ ಶಾಂತಿಧಾಮ ಆವರಣದಲ್ಲೂ ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.
ಅಸೋಸಿಯೇಷನ್ ಪ್ರಮುಖರಾದ ಬಾಲಕೃಷ್ಣ(ಅಪ್ಪು) ರೈ, ಶರತ್ ಶೆಟ್ಟಿ, ಸುನೀಲ್ ಶೆಟ್ಟಿ, ನಿಖಿಲ್ ಆಳ್ವ, ಸುಜಿತ್ ಶೆಟ್ಟಿ ಈ ಸಂದರ್ಭ ಇದ್ದರು.



