ಮಡಿಕೇರಿ: ನಗರದ ವಿದ್ಯುತ್ 66/11 ಕೆ.ವಿ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್ನಲ್ಲಿ ಹಾಗೂ ಎಫ್5 ಜಿ.ಟಿ ರಸ್ತೆ ಫೀಡರ್ನಲ್ಲಿ ಆಗಸ್ಟ್, 06 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿಬೀದಿ, ಪೆನ್ಸನ್ ಲೈನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್, ಹಳೆ ಖಾಸಗಿ ಬಸ್ ಸ್ಟಾಂಡ್, ಜಯನಗರ, ಅಶೋಕಪುರ, ಜಲಾಶ್ರಯ ಬಡಾವಣೆ, ಸರಕಾರಿ ಆಸ್ಪತ್ರೆ, ಮಂಗಳದೇವಿನಗರ, ಅರಣ್ಯಭವನ, ಚೈನ್ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.



