ಇಂದು ಸ. ಕಿ. ಪ್ರಾ. ಹೆಗ್ಗಳ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನ ನಡೆಯಿತು. ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗುತ್ತದೆ. ಶಾಲೆಗಳಲ್ಲಿ ನಡೆದ ಚುನಾವಣೆಗಳ ಅನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಗಳ ಹಂಚಿಕೆ ಮಾಡಿ ಆಯಾ ವರ್ಷದ ಶಾಲಾ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರಧಾನ ಮಂತ್ರಿ, ಶಿಕ್ಷಣ ಮಂತ್ರಿ, ಸ್ವಚ್ಛತಾ ಮಂತ್ರಿ, ಗ್ರಂಥಾಲಯ ಪಾಲನೆ, ರಕ್ಷಣಾ ಮಂತ್ರಿ, ಆಹಾರ ಮಂತ್ರಿ ಹೀಗೆ ನಾನಾ ಖಾತೆಗಳನ್ನು ನೀಡಿ ಮಕ್ಕಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
