ಮಡಿಕೇರಿ : ಕರ್ಣಂಗೇರಿ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಮಕ್ಕಳಿಗೆ ಅಂಧತ್ವ ನಿವಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳಕ್ಕಾಗಿ ವಿಟಮಿನ್ ಎ ದ್ರಾವಣ ಹಾಕಲಾಯಿತು. ವಿಟಮಿನ್ಎ ದ್ರಾವಣ, ಅತಿಸಾರ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ, ಜಿಂಕ್ ಮಾತ್ರೆ ಬಳಕೆ ಬಗ್ಗೆ ಆರೋಗ್ಯ ಇಲಾಖೆಯ phco ದೇವಕಿ ಮಾಹಿತಿ ನೀಡಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಮಳೆಗಾಲದಲ್ಲಿ ಮಕ್ಕಳಿಗೆ ಎದುರಾಗುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಪೋಷಣಾಂಶಯುಕ್ತ ಆಹಾರ ಸೇವನೆ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನಹರಿಸಲು ಸೂಚಿಸಿದರು. ಕುದಿಸಿ ಆರಿಸಿದ ನೀರಿನ ಸೇವನೆ, ಕೈ ತೊಳೆಯುವ ವಿಧಾನಗಳ ಬಗ್ಗೆ ಅರಿವು ಮೂಡಿಸಲಾಯಿತು.ಜಿಲ್ಲಾ ಪೋಶನ್ ಸಂಯೋಜಕಿ ಕಾವ್ಯ, ಅಂಗನವಾಡಿ ಕಾರ್ಯಕರ್ತೆ ಸರೋಜಾ, ಜಯಂತಿ, ಆಶಾ ಕಾರ್ಯಕರ್ತೆ ಅನಿತಾ ರೈ, ಸಹಾಯಕಿ ಮೀನಾ ಹಾಗೂ ಪೋಷಕರು ಹಾಜರಿದ್ದರು.