ವೀರಾಜಪೇಟೆ ಗಣೇಶೋತ್ಸವ – ನಿಯಮ ಮೀರಿ ಅಬ್ಬರದ ಸಂಗೀತ/ಡಿಜೆ ಬಳಕೆ – 16 ಪ್ರಕರಣ ದಾಖಲು

Share this post :

ವೀರಾಜಪೇಟೆ(Virajpet) : ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಸಾಮೂಹಿಕವಾಗಿ ಗಣೇಶೋತ್ಸವ ಆಚರಿಸಲಪಡುವ ವೀರಾಜಪೇಟೆಯಲ್ಲಿ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯ ಶನಿವಾರ(saturday) ರಾತ್ರಿ ವೈಭವದಿಂದ ನೆರವೇರಿದೆ. ಈ ನಡುವೆ ಕಾನೂನು ಉಲ್ಲಂಘನೆ ಸಂಬಂಧ ಪ್ರಕರಣ ಕೂಡಾ ದಾಖಲಾಗಿದೆ.
ಗಣೇಶೋತ್ಸವದಲ್ಲಿ ನಿಯಮ ಮೀರಿ ಧ್ವನಿವರ್ದಕ/ಡಿಜೆ(dj) ಬಳಸದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ ವೀರಾಜಪೇಟೆ ಗಣೇಶೋತ್ಸವ ಮೆರವಣಿಗೆಯಲ್ಲಿ ನಿಯಮ ಮೀರಿ ಅಬ್ಬರದ ಸಂಗೀತ ಬಳಸಲಾಗಿದ್ದು, ಈ ಸಂಬಂಧ 16 ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ. ಗಣೇಶೋತ್ಸವ ಸಮಿತಿ, ಡಿಜೆ ಆಪರೇಟರ್‌ಗಳು, ಬಳಸಲಾದ ವಾಹನಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಂದ ನಂತರ ನಿಯಮ ಉಲ್ಲಂಘನೆ ಮಾಡಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಎಸ್ಪಿ ಕೆ. ರಾಮರಾಜನ್‌ ಪ್ರತಿಕ್ರಿಯಿಸಿದ್ದಾರೆ.

coorg buzz
coorg buzz