ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಕುಶಾಲನಗರದಲ್ಲಿ ವಿನಯ್ ಸೋಮಯ್ಯ(Vinay Somaiah) ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾತನಾಡಿ, ಇಬ್ಬರು ಶಾಸಕರ ಕಿರುಕುಳದಿಂದಾಗಿ ವಿನಯ್ ಎಂಬ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಯಾರೆಂದು ಅವರು ತಮ್ಮ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಆದರೆ, ಬೆಂಗಳೂರಿನಲ್ಲಿ ದಾಖಲಾದ FIR ನಲ್ಲಿ ಶಾಸಕರ ಹೆಸರುಗಳನ್ನು ಸೇರಿಸಿಲ್ಲ. ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಮೇಲೆ ಒತ್ತಡಕ್ಕೆ ಇದೇ ಸ್ಪಷ್ಟ ಸಾಕ್ಷಿ, ವ್ಯಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳ ಮೇಲೆ ಕೇಸ್ ಹಾಕಿದ್ದಾರೆ. ಕೇಸ್ ಹಾಕಿ ಬೆದರಿಸುವ ಹೊಸ ಷಡ್ಯಂತ್ರ ಕೊಡಿಗಿನಲ್ಲಿ ಆರಂಭವಾಗಿದೆ. ಕೊಡಗಿನಲ್ಲಿ ಕಾಂಗ್ರೆಸ್ ಕಚೇರಿಯಂತೆ ಪೊಲೀಸ್ ಠಾಣೆಗಳು ಆಗಿವೆ. ಜನರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಬಿಜೆಪಿಯಿಂದ ರಾಜಕೀಯ ಎಂಬ ಪೊನ್ನಣ್ಣ ಟೀಕೆಗೆ ವಿಜಯೇಂದ್ರ ಪ್ರತಿಕ್ರಯಿಸಿ, ಅವರೊಬ್ಬರೇ ಅಲ್ಲ ನಮಗೂ ಕಾನೂನು ಗೊತ್ತಿದೆ ನಾವು ಈ ಪ್ರಕರಣವನ್ನು ಅಷ್ಟು ಸುಲಭದಲ್ಲಿ ಬಿಡುವುದಿಲ್ಲ ನಮ್ಮ ಕಾರ್ಯಕರ್ತನಿಗೆ ಆದ ನೋವನ್ನು ಕೂಡ ನಾವು ಮರೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪ್ರತಿಭಟನೆಗೂ ಮೊದಲೇ ಇಬ್ಬರು ಶಾಸಕರ ವಿರುದ್ಧ FIR ದಾಖಲಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಆದರೆ, ಪೊಲೀಸರು ಶಾಸಕರ ಹೆಸರುಗಳನ್ನು ಬಿಟ್ಟು, ತೆನ್ನೀರ ಮೈನಾ ಎಂಬವರ ಮೇಲೆ ಮಾತ್ರ FIR ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.