ವೀರಾಜಪೇಟೆ : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ʼಹದಿಹರೆಯದ ಆರೋಗ್ಯʼ ವಿಷಯವಾಗಿ ಮಾಹಿತಿ ಕಾರ್ಯಾಗಾರ ನಡೆಯಿತು.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ(RKSK)ದ ಆಪ್ತ ಸಮಲೋಚಕ ಲೋಚನ್ ಹದಿಹರೆಯದ ಸಮಸ್ಯೆಗಳು, ಮಾದಕ ವಸ್ತು ಬಳಕೆಯ ದುಷ್ಪರಿಣಾಮ, ಪೌಷ್ಠಿಕ ಆಹಾರ, ವೈಯಕ್ತಿಕ ಸ್ವಚ್ಛತೆ, ದೈಹಿಕ ಬದಲಾವಣೆ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭ ಮೇಲ್ವಿಚಾರಕಿ ಸುಮಯ್ಯ ಕೆ.ಎಂ., ಸಿಬ್ಬಂದಿ ಜ್ಯೋತಿಬಾ, ಸೌಮ್ಯ, ಶರೀಫುಲ್ಲಾ ಹಾಗೂ ಇತರರಿದ್ದರು.