ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತದಲ್ಲಿ (Road accident) ತಾಯಿ ಮಗ ಸಾವನಪ್ಪಿದ್ದಾರೆ. ಬಿ.ಶೆಟ್ಟಿಗೇರಿ ಅರ್ಚಕರ ಕುಟುಂಬದ ಸುದರ್ಶನ ಬೆಂಗಳೂರುವಿನಲ್ಲಿ ಉದ್ಯಗೋದಲ್ಲಿ ಇದ್ದು ತಾಯಿಯೊಂದಿಗೆ ಗೋಣಿಕೊಪ್ಪಲಿನಿಂದ ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ತನ್ನ ಓಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಸಂದರ್ಭ ಈ ಘಟನೆ ನಡೆದಿದೆ.
ಕೇರಳ ರಾಜ್ಯದ ಲಾರಿ ಮೈಸೂರಿನತ್ತ ತರಕಾರಿ ಸಾಗಾಟ ಮಾಡಲು ತೆರಳುತ್ತಿತ್ತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ (42) ಹಾಗೂ ತಾಯಿ ಲಲಿತಾ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಓಮಿನಿ ವ್ಯಾನ್ ಸಂಪೂರ್ಣವಾಗಿ ಜಖಂಗೊಂಡಿದೆ. ಸುದರ್ಶನ್ ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಸಹೋದರ ಮತ್ತು ಆತನ ಕುಟುಂಬವನ್ನು ಬಿಟ್ಟು ಅಗಲಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಇವರ ತಂದೆಯವರು ನಿಧನ ಹೊಂದಿದ್ದರು. ಮೃತರ ಮರಣೋತ್ತರ ಪರೀಕ್ಷೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ನೆರವೇರಿದೆ.