ಸುಂಟಿಕೊಪ್ಪ : ಹೊಳೆಯಲ್ಲಿ ಮುಳುಗಿ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಹರದೂರಿನಲ್ಲಿ ಸಂಭವಿಸಿದೆ.
ಮಹಮ್ ರಹೀಜ್(16) ಮಹಮದ್ ನಿಹಾಲ್ (16) ಮೃತ ದುರ್ದೈವಿಗಳು. ಸೋಮವಾರಪೇಟೆ ತಾಲ್ಲೂಕಿನ ಹರದೂರು ಹೊಳೆಗೆ ಈ ಇಬ್ಬರು ಯುವಕರು ಇಂದು ಮಧ್ಯಾಹ್ನ ಈಜಲು ತೆರಳಿದ್ದರು ಎನ್ನಲಾಗಿದೆ. ಡಿ. ಚೆನ್ನಮ್ಮ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಇವರು ಇಂದು ಮಧ್ಯಾಹ್ನ ಕಾಲೇಜು ಮುಗಿಸಿ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ನುರಿತ ಈಜು ತಜ್ಞರು ಆಗಮಿಸಿ ಬಾಲಕರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



