ಹೆಸರಿಗೆ ಬ್ಯೂಟಿ ಪಾರ್ಲರ್, ಮಸಾಜ್‌ ಸೆಂಟರ್‌ – ಆದ್ರೆ ಅಲ್ಲಿ ಆಗುತ್ತಿದ್ದ ಮಸಾಜ್‌ ಬೇರೆಯದ್ದೇ..!

Share this post :

ವೀರಾಜಪೇಟೆ : ಬ್ಯೂಟಿ ಪಾರ್ಲರ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಪ್ರದೀಪನ್‌ ಮತ್ತು ಶಿಜು ಬಂಧಿತರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ವೀರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿನಗರದಲ್ಲಿ ಖಾಸಗಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿದ್ದ ಇಬ್ಬರು ಆರೇಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಸೆಂಟರ್ ನಡೆಸುತಿದ್ದರು. ಆದರೆ ಅಲ್ಲಿ ಬೇರೆಯದ್ದೇ ಚಟುವಟಿಕೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಇತ್ತು. ಕೆಲವರು ಐಶಾರಾಮಿ ಕಾರಿನಲ್ಲಿ ಬಂದು ಒಂದಷ್ಟು ಸಮಯ ಕಳೆದು ಹೋಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.
ಅದರ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಕೊಡಗು, ಹೊರ ಜಿಲ್ಲೆ, ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದುದು ಕಂಡುಬಂದಿದೆ. ಅಲ್ಲಿದ್ದ ಯುವತಿಯರನ್ನು ರಕ್ಷಿಸಿ, ಪ್ರದೀಪನ್‌ ಮತ್ತು ಶಿಜುವನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಪೊಲೀಸರು.

coorg buzz
coorg buzz