ಸುಂಟಿಕೊಪ್ಪ : ಹಾರಂಗಿ ಹಿನ್ನೀರಿನಲ್ಲಿ ಬುಧವಾರ ನಡೆದಿದ್ದ ದುರಂತದಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜರು ತೆರಳಿದ್ದ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಆ ಪೈಕಿ ಚಂಗಪ್ಪ(17) ಮೃತದೇಹ ನಿನ್ನೆಯೇ ಪತ್ತೆಯಾಗಿತ್ತು. ಮಡಿಕೇರಿ ರಾಜಾಸೀಟ್ ಬಳಿಯ ನಿವಾಸಿ ತರುಣ್ ತಮ್ಮಯ್ಯ (17) ಮೃತದೇಹ ಇಂದು ಪತ್ತೆಯಾಗಿದೆ. ಹೆಬ
ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು, ದುಬಾರೆ Rafting ತಂಡದವರು ಮೃತದೇಹ ಪತ್ತೆಯಾಗಿ ಕಾರ್ಯಾಚರಣೆ ನಡೆಸಿದ್ದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



