ಯುವಜನತೆಗೆ ಸುವರ್ಣವಕಾಶ: ರೆಗ್ಯುಲರ್ ಕೋರ್ಸ್ ಬ್ಯಾಚ್‌ನ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದ ಟೊಯೋಟಾ

Toyota Technical Training Institute

Share this post :

ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣಕ್ಕೆ ಬದ್ಧವಾಗಿರುವ ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ತನ್ನ 2025-2028ನೇ ಸಾಲಿನ ಟಿಟಿಟಿಐ ರೆಗ್ಯುಲರ್ ಕೋರ್ಸ್ ಬ್ಯಾಚ್‌ ನ ಪ್ರವೇಶ ಪ್ರಕ್ರಿಯೆಯನ್ನು ಇಂದು ಪ್ರಾರಂಭಿಸಿದೆ. ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಪ್ರಾಯೋಜಿತ ಈ ಕೋರ್ಸು ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಯುವ ಸಮೂಹಕ್ಕೆ ಶೈಕ್ಷಣಿಕ ತರಬೇತಿ, ಉದ್ಯಮಕ್ಕೆ ಸಂಬಂಧಿತ ತರಬೇತಿ ಒದಗಿಸಿ ಅವರನ್ನು ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ.

2007ರಲ್ಲಿ ಸ್ಥಾಪನೆಯಾದ ಟಿಟಿಟಿಐ ಭಾರತದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಮಾದರಿ ಸಂಸ್ಥೆ ಆಟೋಮೊಬೈಲ್ ಅಸೆಂಬ್ಲಿ, ವೆಲ್ಡ್, ಪೇಂಟ್, ಮತ್ತು ಮೆಕಾಟ್ರಾನಿಕ್ಸ್‌ ನಂತಹ ಪ್ರಮುಖ ವಿಭಾಗಗಳಲ್ಲಿ ಮೂರು ವರ್ಷಗಳ ಸಂಪೂರ್ಣ ವಸತಿ ತರಬೇತಿ ಕೋರ್ಸ್ ಒದಗಿಸಲಾಗುತ್ತದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ರೂಪಿಸಲಾದ ಈ ಪಠ್ಯಕ್ರಮವು ದೇಹ ಮತ್ತು ಆಟಿಟ್ಯೂಡ್ (ಶೇ.60), ಜ್ಞಾನ (ಶೇ.20), ಮತ್ತು ಕೌಶಲ್ಯ (ಶೇ.20) ಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹಾಗಾಗಿ ಇಲ್ಲಿ ವಿದ್ಯಾರ್ಥಿಗಳು ಕೇವಲ ತಾಂತ್ರಿಕ ಜ್ಞಾನವನ್ನು ಮಾತ್ರವಲ್ಲದೆ ಆಧುನಿಕ ಉತ್ಪಾದನಾ ಕ್ಷೇತ್ರದಲ್ಲಿ ಉತ್ಕೃಷ್ಟ ತಂತ್ರಜ್ಞರಾಗಲು ಬೇಕಾದ ಶಿಸ್ತು ಮತ್ತು ಮನಸ್ಥಿತಿಯನ್ನೂ ಹೊಂದುತ್ತಾರೆ.

2023ರಲ್ಲಿ ಟಿಟಿಟಿಐ ತನ್ನ ವಾರ್ಷಿಕ ಪ್ರವೇಶಾತಿ ಸಂಖ್ಯೆಯನ್ನು 600ರಿಂದ 1,200 ವಿದ್ಯಾರ್ಥಿಗಳಿಗೆ ಹೆಚ್ಚಿಸಿದ್ದು, ಇದರಲ್ಲಿ ಅರ್ಧದಷ್ಟು ಸ್ಥಾನಗಳನ್ನು ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಈ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ. ಸಂಸ್ಥೆಯು ಹೊಸ ತರಗತಿ ಕೊಠಡಿಗಳು, ಅತ್ಯಾಧುನಿಕ ತರಬೇತಿ ಉಪಕರಣಗಳು, ಮತ್ತು ಅತ್ಯಾಧುನಿಕ ವಸತಿ ಸೌಕರ್ಯಗಳನ್ನು ಹೊಂದಿದ್ದು, ಜೊತೆಗೆ ಹೆಣ್ಣುಮಕ್ಕಳಿಗಾಗಿಯೇ ಮೀಸಲಾದ ಅತ್ಯುತ್ತಮ ವಸತಿಗೃಹವನ್ನೂ ಹೊಂದಿದೆ. ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ಗಳೂ ಲಭ್ಯವಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಸುಲಭಗೊಳಿಸುತ್ತದೆ.

ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಫೈನಾನ್ಸ್ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ಜಿ. ಶಂಕರ್ ಅವರು , “ಸೂಕ್ತ ಅವಕಾಶಗಳನ್ನು ಒದಗಿಸಿ ಜನರನ್ನು ಸಬಲೀಕರಣಗೊಳಿಸುವ ಮೂಲಕ ನಿಜವಾದ ಪ್ರಗತಿ ಆರಂಭವಾಗುತ್ತದೆ ಎಂದು ನಾವು ಟೊಯೋಟಾ ಸಂಸ್ಥೆಯಲ್ಲಿ ನಂಬಿಕೆ ಹೊಂದಿದ್ದೇವೆ. ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಕೂಡ ಈ ನಂಬಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕದ ಗ್ರಾಮೀಣ ಭಾಗದ ಯುವಕರಿಗೆ ಧನಸಹಾಯ ಒದಗಿಸುವುದರ ಜೊತೆಗೆ ವಿಶ್ವ ದರ್ಜೆಯ ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮತ್ತು ಲಿಂಗ ಸಮಾನತೆಯನ್ನು ಸಾಧಿಸುವ ಮೂಲಕ ನಾವು ಸ್ಕಿಲ್ ಇಂಡಿಯಾ ಮಿಷನ್‌ ಗೆ ಬೆಂಬಲ ನೀಡುತ್ತಿದ್ದೇವೆ. ಮುಖ್ಯವಾಗಿ ಭಾರತದ ಉತ್ಪಾದನಾ ಶ್ರೇಷ್ಠತೆಯನ್ನು ಸಾರುವ ಭವಿಷ್ಯ- ಸಿದ್ಧ ಕಾರ್ಯಪಡೆಯನ್ನು ನಿರ್ಮಿಸುತ್ತಿದ್ದೇವೆ. ಈ ಅಪೂರ್ವ ಪಯಣದ ಭಾಗವಾಗಲು ಉತ್ಸಾಹಿ ಯುವ ಮನಸ್ಸುಗಳನ್ನು ಆಹ್ವಾನಿಸುತ್ತಿದ್ದೇವೆ,” ಎಂದರು.

ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ’ ಮಿಷನ್‌ ಗೆ ಕೊಡುಗೆ ನೀಡುವ ಸಲುವಾಗಿ ಜಪಾನೀಸ್ ಶೈಲಿಯ ಉತ್ಪಾದನಾ ಕೌಶಲ್ಯಗಳು ಮತ್ತು ಪದ್ಧತಿಗಳನ್ನು ಕಲಿಸುವ ಉದ್ದೇಶದಿಂದ ಪ್ರಾರಂಭವಾಗಿರುವ ಜಪಾನ್ ಇಂಡಿಯಾ ಇನ್‌ ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ [ಜೆಐಎಂ] ಸ್ಕಿಲ್ ಟ್ರಾನ್ಸ್ ಫರ್ ಪ್ರಮೋಷನ್ ಪ್ರೋಗ್ರಾಮ್ ಗೆ ಆಯ್ಕೆಯಾಗಿರುವ ಸಂಸ್ಥೆಗಳಲ್ಲಿ ಟಿಟಿಟಿಐ ಕೂಡ ಒಂದಾಗಿದೆ.

ಆಟೋಮೊಟಿವ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (ಎ ಎಸ್ ಡಿ ಸಿ) ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಟ್ರೇನಿಂಗ್ (ಡಿಜಿಟಿ)ನಿಂದ ಮಾನ್ಯತೆ ಪಡೆದಿರುವ ಟಿಟಿಟಿಐ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ನೀಡುತ್ತಿದ್ದು, ಇದರಲ್ಲಿ ವರ್ಲ್ಡ್‌ಸ್ಕಿಲ್ಸ್ (ಸ್ಕಿಲ್ ಒಲಿಂಪಿಕ್ಸ್) ಕೂಡ ಸೇರಿದೆ. ಟಿಟಿಟಿಐ ವಿದ್ಯಾರ್ಥಿಗಳು 2015ರಿಂದ 2024ರವರೆಗೆ ಜಾಗತಿಕ ವೇದಿಕೆಯಲ್ಲಿ ಸತತವಾಗಿ ಶ್ರೇಷ್ಠ ಸಾಧನೆ ಮಾಡುತ್ತಾ ಬಂದಿದ್ದಾರೆ. ಮೆಕಾಟ್ರಾನಿಕ್ಸ್, ಪ್ರೊಟೊಟೈಪ್ ಮಾಡೆಲಿಂಗ್, ಮತ್ತು ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್‌ ನಲ್ಲಿ ಅನೇಕ ಪದಕಗಳು ಮತ್ತು ಎಕ್ಸಲೆನ್ಸ್ ಮೆಡಾಲಿಯನ್‌ಗಳನ್ನು ಗೆದ್ದಿದ್ದಾರೆ. 2024ರಲ್ಲಿ ಸಸ್ಟೇನೇಬಲ್ ಪ್ರಾಕ್ಟೀಸ್ ಅವಾರ್ಡ್ ಕೂಡ ಪಡೆದಿದ್ದಾರೆ.

ಅರ್ಹತೆ:
ಟಿಟಿಟಿಐ ರೆಗ್ಯುಲರ್ ಕೋರ್ಸ್
[ಕೌಶಲ್ಯ, ಜ್ಞಾನ ಮತ್ತು ಆಟಿಟ್ಯೂಡ್ ಅಭಿವೃದ್ಧಿಯ ಮೇಲೆ ಕೇಂದ್ರೀಕೃತ ಸಮಗ್ರ ತರಬೇತಿ]
ವಯಸ್ಸು 16 ರಿಂದ 17 ವರ್ಷಗಳ ನಡುವೆ (ಆಗಸ್ಟ್ 1, 2025 ರಂತೆ)
ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ. ಒಟ್ಟಾರೆ ಶೇ.50, ಗಣಿತ ಮತ್ತು ವಿಜ್ಞಾನದಲ್ಲಿ ತಲಾ ಶೇ.45 ಅಂಕ ಗಳಿಕೆ
ಅವಧಿ 3 ವರ್ಷಗಳು
ಆರ್ಥಿಕ ಹಿನ್ನೆಲೆ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಯುವಕರು
ಅರ್ಜಿ ಹಾಕಬಹುದಾದವರು ಹುಡಗರು ಮತ್ತು ಹುಡುಗಿಯರು

ಕೋರ್ಸ್ ಮಾಹಿತಿ/ ವಿಭಾಗಗಳು (ಒಬ್ಬ ಅಭ್ಯರ್ಥಿಗೆ ಒಂದು) ವಿಭಾಗಗಳು:
* ಆಟೋಮೊಬೈಲ್ ವೆಲ್ಡ್
* ಆಟೋಮೊಬೈಲ್ ಪೇಂಟ್
* ಆಟೋಮೊಬೈಲ್ ಅಸೆಂಬ್ಲಿ
* ಮೆಕಾಟ್ರಾನಿಕ್ಸ್

ಪ್ರಮಾಣೀಕರಣ
ಎನ್ ಎ ಸಿ (ನ್ಯಾಷನಲ್ ಅಪ್ರೆಂಟಿಸ್ ಸರ್ಟಿಫಿಕೇಟ್)
ಎ ಎಸ್ ಡಿ ಸಿ (ಆಟೋಮೊಟಿವ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್)
ಟೊಯೋಟಾ, ಜೆಐಎಂ (ಜಪಾನ್- ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್)
ಉಚಿತ ಸೌಲಭ್ಯ
1. ಶಿಕ್ಷಣ ಮತ್ತು ತರಬೇತಿ
2. ಆಹಾರ
3. ಹಾಸ್ಟೆಲ್

ಸೂಚನೆ:
ಈ ಕೆಳಗೆ ಪರೀಕ್ಷಾ ಕೇಂದ್ರಗಳ ವಿವರಗಳಿವೆ. (ನಿಮಗೆ ಸಮೀಪದ ಕೇಂದ್ರವನ್ನು ಆಯ್ಕೆಮಾಡಿ ಮತ್ತು ಎಸ್ ಎಸ್ ಎಳ್ ಸಿ ಅಂಕಪಟ್ಟಿ, ಆಧಾರ್ ಕಾರ್ಡ್, 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ತೆಗೆದುಕೊಂಡು ಬನ್ನಿ)

ಸ್ಥಳ ದಿನಾಂಕ ವಿಳಾಸ
ಬಿಡದಿ: ಮೇ 17, 2025 – ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್, ಪ್ಲಾಟ್ ನಂ.1, ಬಿಡದಿ ಇಂಡಸ್ಟ್ರಿಯಲ್ ಏರಿಯಾ, ರಾಮನಗರ ತಾಲೂಕು, ಬೆಂಗಳೂರು – 562109
ಶಿವಮೊಗ್ಗ: ಮೇ 17, 2025 – ಕರ್ನಾಟಕ ಪಬ್ಲಿಕ್ ಸ್ಕೂಲ್, ಹೈಸ್ಕೂಲ್ ವಿಭಾಗ, ಬಿಎಚ್ ರಸ್ತೆ, ಶಿವಮೊಗ್ಗ, ಮೀನಾಕ್ಷಿ ಭವನ ಹೋಟೆಲ್ ಸಮೀಪ, 577201
ತುಮಕೂರು: ಮೇ 18, 2025 – ಚೇತನ ವಿದ್ಯಾ ಮಂದಿರ, ಕೆಇಬಿ ಮುಖ್ಯ ರಸ್ತೆ, ಹೊರಪೇಟೆ, ಕೊತಿತೋಪು, ತುಮಕೂರು – 572101
ಹಾಸನ: ಮೇ 18, 2025 – ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಸೀತಾ ರಾಮಂಜನೇಯ ದೇವಸ್ಥಾನ ರಸ್ತೆ, ನಾರ್ತ್ ಎಕ್ಸ್ ಟೆನ್ಷ್, ಹಾಸನ – 573201
ಹುಬ್ಬಳ್ಳಿ: ಮೇ 18, 2025 – ಕೆ.ಎಲ್.ಇ ಸೊಸೈಟಿಯ ಶ್ರೀಮತಿ. ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್, ಬಿವಿಬಿ ಕಾಲೇಜು ಕ್ಯಾಂಪಸ್, ವಿದ್ಯಾನಗರ, ಹುಬ್ಬಳ್ಳಿ – 580031

* ಈ ಲಿಂಕ್‌ ನ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿ: https://forms.office.com/r/UxSGWqBcGU ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. (ಲಿಂಕ್ ಕ್ಲಿಕ್ ಮಾಡುವ ಮೊದಲು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಇಂಟರ್ನೆಟ್ ಪ್ರತಿಯನ್ನು ಸಿದ್ಧವಾಗಿಡಿ) ಅರ್ಹ ಅಭ್ಯರ್ಥಿಗಳನ್ನು ನೋಂದಾಯಿತ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಲಾಗುತ್ತದೆ.

* ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವೆಬ್‌ಸೈಟ್ ಗೆ ಭೇಟಿ ನೀಡಿ – Toyota India | TTTI (toyotabharat.com)
* ಯಾವುದೇ ಸ್ಪಷ್ಟೀಕರಣಕ್ಕಾಗಿ ಸಂಪರ್ಕಿಸಿ: ಮೊಬೈಲ್: 8050673677, 9591999668
* ಲ್ಯಾಂಡ್‌ಲೈನ್: 080 66292546, 080 66292536 [ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ]
* ವಿ.ಸೂ: ಕಂಪನಿಯು ಯಾವುದೇ ಮುನ್ಸೂಚನೆಯಿಲ್ಲದೆ ಪ್ರವೇಶಾತಿ ನಿಯಮಗಳನ್ನು ಮಾರ್ಪಡಿಸುವ, ಬದಲಾಯಿಸುವ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.