ಭಾರತೀಯ ಕಾರು ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಅದೇ ವೇಗದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ (Second hand cars) ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಅನೇಕ ಜನರು ಸೆಕೆಂಡ್ ಹ್ಯಾಂಡ್ ಕಾರು ಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಬಳಸಿದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ಮುನ್ನ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಬಳಸಿದ ಕಾರನ್ನು ಖರೀದಿಸುವಾಗ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಜೆಟ್‌ಗೆ ಸೂಕ್ತ ಕಾರು
ನಿಮ್ಮ ಅಗತ್ಯಗಳಿಗೆ ಯಾವ ರೀತಿಯ ಕಾರು ಸೂಕ್ತವಾಗಿದೆ ಎಂಬುದನ್ನು ಮೊದಲು ನಿರ್ಧರಿಸಬೇಕು (ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‍ಯುವಿ), ನಂತರ ಅದರ ಉದ್ದೇಶಿತ ಬಳಕೆ ನಗರ ಪ್ರಯಾಣ, ಪ್ರವಾಸಗಳ ಏನು ಎಂಬುದನ್ನು ನಿರ್ಧರಿಸಿ, ಆ ಬಳಿಕ ನಿಮ್ಮ ಬಜೆಟ್‌ಗೆ ಆ ಕಾರು ಸಿಗುವುದೇ ಎಂದು ಹುಡುಕಿ. ಖರೀದಿ ಬೆಲೆಯನ್ನು ಮಾತ್ರವಲ್ಲದೆ ವಿಮೆ, ತೆರಿಗೆಗಳು, ನೋಂದಣಿ ಮತ್ತು ಸಂಭಾವ್ಯ ರಿಪೇರಿಗಳನ್ನು ಸಹ ಪರಿಗಣಿಸಬೇಕು.
ಸರ್ವಿಸ್ ರೆಕಾರ್ಡುಗಳನ್ನು ಪರಿಶೀಲಿಸಿ
ಕಾರಿನ ಸರ್ವಿಸ್ ಹಿಸ್ಟರಿ ಪರಿಶೀಲಿಸಿ, ಅದನ್ನು ಚೆನ್ನಾಗಿ ನಿರ್ವಹಿಸಲಾಗಿದೆಯೆ ಹಾಗೂ ದಾಖಲೆಗಳು ಅಧಿಕೃತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರ್‌ಸಿ ಬುಕ್, ವಿಮೆ, ತೆರಿಗೆ ದಾಖಲೆಗಳು ಮತ್ತು ಪಿಯುಸಿ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳನ್ನು ನೋಡಬೇಕು. ಓಡೋಮೀಟರ್ ಟ್ಯಾಂಪರಿಂಗ್ ಅಥವಾ ಮಾಲೀಕತ್ವದಲ್ಲಿನ ಲೋಪಗಳನ್ನು ನೋಡಿ.
ಸಂಪೂರ್ಣವಾಗಿ ಪರಿಶಿಲಿಸಿ
ಕಾರ್ ಮಾಡಲ್ ವಿಶ್ವಾಸಾರ್ಹತೆ, ಸಾಮಾನ್ಯ ಸಮಸ್ಯೆಗಳು ಮತ್ತು ಮಾರುಕಟ್ಟೆ ಮೌಲ್ಯವನ್ನು ತನಿಖೆ ಮಾಡಿ. ಆನ್‌ಲೈನ್ ರಿವ್ಯೂಗಳು, ಮಾಲೀಕರು ನೀಡಿರುವ ಪ್ರತಿ ವಿವರಗಳನ್ನು ಕೂಲಂಕುಶವಾಗಿ ಓದಿ. ಲಭ್ಯವಿದ್ದರೆ ವಾಹನ ಹಿಸ್ಟರಿ ವರದಿಯನ್ನು ಪಡೆಯಿರಿ. ನಿಜವಾಗಲು ತುಂಬಾ ಒಳ್ಳೆಯ ಕಾರು ಎಂದೆನಿಸಿದರೆ ಇದೇ ರೀತಿಯ ಇತರ ಕಾರುಗಳ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿ.
ಎಚ್ಚರಿಕೆಯಿಂದ ಪರೀಕ್ಷಿಸಿ
ಕಾರಿನ ಹೊರಭಾಗದ ವಿವರವಾದ ತಪಾಸಣೆಯನ್ನು ನಡೆಸಿ (ಡೆಂಟ್‌ಗಳು, ತುಕ್ಕು, ಬಣ್ಣ ಕಳೆದುಕೊಂಡಿರುವುದು), ಒಳಾಂಗಣ (ಸೀಟುಗಳ ಸ್ಥಿತಿ, ಎಲೆಕ್ಟ್ರಾನಿಕ್ಸ್, ಡ್ಯಾಶ್‌ಬೋರ್ಡ್) ಮತ್ತು ಹುಡ್ ಅಡಿಯಲ್ಲಿ (ಎಂಜಿನ್ ಸ್ಥಿತಿ, ಸೋರಿಕೆಗಳು, ಟೈರ್ ಮತ್ತು ಬ್ಯಾಟರಿ ಬಾಳಿಕೆ) ಯಾವುದಾದರೂ ಸಮಸ್ಯೆಗಳು ಇವೆಯೇ ಎಂಬುದನ್ನು ಪರಿಶೀಲಿಸಿ.
ಡ್ರೈವ್ ಮಾಡಿ ನೋಡಿ
ಸಂಪೂರ್ಣ ಟೆಸ್ಟ್ ಡ್ರೈವ್‌ಗಾಗಿ ಕಾರನ್ನು ತೆಗೆದುಕೊಳ್ಳಿ. ಅಸಾಮಾನ್ಯ ಶಬ್ದಗಳು ಬರುತ್ತವೆಯೇ ನೋಡಿ. ಹಾಗೆಯೇ ಗೇರ್‌ಗಳು, ಸ್ಟೀರಿಂಗ್ ಮತ್ತು ಬ್ರೇಕ್‌ಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿಯೇ ಎಂಬುದನ್ನು ಪರಿಶೀಲಿಸುವುದು ತುಂಬಾ ಮುಖ್ಯ. ಎಲೆಕ್ಟ್ರಾನಿಕ್ಸ್ ಹಾಗೂ ಎಸಿಯನ್ನು ಪರೀಕ್ಷಿಸಿ. ಹಾಗಯೇ ವಿವಿಧ ಚಾಲನಾ ಪರಿಸ್ಥಿತಿಗಳಲ್ಲಿ ಸೌಕರ್ಯಯುತವಾಗಿದೆಯೇ ಹಾಗೂ ನಿರ್ವಹಣೆ ಹೇಗಿದೆ ಎಂಬುದನ್ನು ಮೌಲ್ಯಮಾಪನ ಮಾಡಿ.
ಒಪ್ಪಿಗೆಯಾದರೆ ಮಾತುಕತೆ ನಡೆಸಿ ಅಂತಿಮಗೊಳಿಸಿ
ನಿಮ್ಮ ಪರಿಶೀಲನೆ ಆಧಾರದ ಮೇಲೆ, ಬೆಲೆಯನ್ನು ಮಾತುಕತೆ ನಡಿಸಿ. ಏನಾದರೂ ತಪ್ಪಾದಲ್ಲಿ ಹೊರನಡೆಯಲು ಹಿಂಜರಿಯಬೇಡಿ. ಪಾವತಿ ಮಾಡುವ ಮೊದಲು ಎಲ್ಲಾ ದಾಖಲೆಗಳನ್ನು ಎರಡು ಬಾರಿ ಪರಿಶೀಲಿಸಿ, ಮೇಲಾಗಿ ಸುರಕ್ಷಿತ ವಿಧಾನಗಳನ್ನು ಬಳಸಿ. ಖರೀದಿಯ ನಂತರ ಎಲ್ಲಾ ದಾಖಲೆಗಳನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ. ಖರೀದಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಮಯ ಕಳೆಯುವುದರಲ್ಲಿ ತಪ್ಪಿಲ್ಲ, ಇದು ಮುಂದಿನ ದೀರ್ಘಾವಧಿಯಲ್ಲಿ ನಿಮ್ಮ ಕಾರು ಯಾವುದೇ ತಲೆ ನೋವು ಕೊಡುವುದಿಲ್ಲ. ನಿಮ್ಮ ಸೆಕೆಂಡ್ ಹ್ಯಾಂಡ್ ಕಾರು ವಿಶ್ವಾಸಾರ್ಹವಾಗಿ ಮತ್ತು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.