ಸಿದ್ದಾಪುರ : ಕೊಡಗು ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಉಪಟಳ ನಿರಂತರವೆಂಬಂತಾಗಿದೆ. ಈ ನಡುವೆ ಅಲ್ಲಲ್ಲಿ ಹುಲಿಗಳ ದರ್ಶನವಾಗುತ್ತಿದ್ದು, ಅರಣ್ಯದಂಚಿನ ಜನರ ನಿದ್ದೆಗೆಡಿಸಿದೆ. ಇಂಜಲಗೆರೆ ಗ್ರಾಮದಲ್ಲಿ ಹುಲಿಯ ಹೆಜ್ಜೆಗುರುತು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗ್ರಾಮದ ಮಂಡೇಪಂಡ ಪ್ರವೀಣ್ ಬೋಪಯ್ಯ ಅವರ ಕಾಫಿ ತೋಟದಲ್ಲಿ ಮಂಗಳವಾರ ಹೆಜ್ಜೆಗುರುತು ಕಂಡಿದೆ. ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕೆಲವು ದಿನದ ಹಿಂದೆ ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಬಾಣಂಗಾಲ ವ್ಯಾಪ್ತಿಯಲ್ಲಿ ವ್ಯಾಘ್ರನ ದಾಳಿಗೆ ಜಾನುವಾರು ಮೃತಪಟ್ಟಿದ್ದವು. ಇದೀಗ ಕಾಫಿ ತೋಟದಲ್ಲಿ ಹೆಜ್ಜೆ ಗುರುತು ಕಾಣಿಸಿಕೊಂಡಿರುವುದು ಗಾಬರಿಗೊಳಿಸಿದೆ.



