ಮಡಿಕೇರಿ : ಮೃ*ತ ಹಂದಿಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ಗಾಳಿಬೀಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಯಾಲದಾಳು ಶರತ್ ಎಂಬವರ ತೋಟಕ್ಕೆ ಹೋಗುವ ರಸ್ತೆಯಲ್ಲಿ 2 ದಿನಗಳ ಹಿಂದೆ ಯಾರೋ ತಂದು ಎಸೆದು ಹೋಗಿದ್ದಾರೆ. ಇದು ಆ ಭಾಗದ ಜನರನ್ನು ಆತಂಕಕ್ಕೀಡು ಮಾಡಿದೆ. ಮಾರಕ ಕಾಯಿಲೆಯಿಂದ ಮೃತಪಟ್ಟ ಹಂದಿಯಾಗಿದ್ದರೆ ಇದರಿಂದ ಜನರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಜೊತೆಗೆ ಅದು ಕೊಳೆಯುತ್ತಾ ಹೋದಂತೆ ದುರ್ವಾಸನೆಯಿಂದಾಗಿ ಇಡೀ ಪರಿಸರ ಹಾಳಾಗಲಿದೆ. ಈ ಬಗ್ಗೆ ಸ್ಥಳೀಯಾಡಳಿತ ಎಚ್ಚೆತ್ತು, ಹಂದಿಗಳನ್ನು ಎಸೆದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ದಿಶಾಂತ್ ಗಾಳಿಬೀಡು ಅವರು ಆಗ್ರಹಿಸಿದ್ದಾರೆ.



