ಮಡಿಕೇರಿ : ಪೊನ್ನಂಪೇಟೆಯ 66/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಫೀಡರ್ ನಿರ್ವಹಣೆ/ ಜಿಒಎಸ್ ಬದಲಾವಣೆ ಕಾಮಗಾರಿ ಕೈಗೊಗೊಳ್ಳುತ್ತಿದೆ. ಈ ಕೇಂದ್ರದಿಂದ ಹೊರಹೊಮ್ಮುವ ಎಫ್1-ನಲ್ಲೂರು, ಎಫ್2-ಬಾಳೆಲೆ, ಎಫ್4-ತಿತಿಮತಿ, ಎಫ್5-ಪಾಲಿಬೆಟ್ಟ, ಎಫ್6 -ಬೇಗೂರು, ಎಫ್7-ಗೋಣಿಕೊಪ್ಪ, ಎಫ್8-ಪೊನ್ನಂಪೇಟೆ, ಎಫ್9-ಹಾತೂರು, ಎಫ್10-ಹೈಸೊಡ್ಲೂರು, ಎಫ್11-ಕೈಕೇರಿ, ಎಫ್12-ಬೆಕ್ಕಸೊಡ್ಲೂರು, ಎಫ್13 ದೇವನೂರು ಫೀಡರ್ನಲ್ಲಿ ಜನವರಿ 22 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿ ಆಗುವ ಗ್ರಾಮಗಳಾದ ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅತ್ತೂರು, ಕಾನೂರು, ಬಾಳೆಲೆ, ರಾಜಪುರ, ದೇವನೂರು, ಮಲ್ಲೂರು, ಕಿರುಗೂರು, ವಡ್ಡರಮಾಡು, ಮಾಯಮುಡಿ, ಸುಳುಗೋಡು, ಧನುಗಾಲ, ಕಾರ್ಮಾಡು, ಕೊಟ್ಟಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಕೋರಿದ್ದಾರೆ.



