ಮಡಿಕೇರಿ : 66/11ಕೆ.ವಿ ಪೊನ್ನಂಪೇಟೆ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್ 12 ಬೆಕ್ಕೆಸೊಡ್ಲೂರು ಫೀಡರ್ನಲ್ಲಿ ಅಕ್ಟೋಬರ್, 15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಬೆಕ್ಕೆಸೊಡ್ಲೂರು, ಬಲ್ಯಮಂಡೂರು, ಕಾನೂರು, ಕೋತೂರು, ಬೊಮ್ಮಾಡು, ನಿಡುಗುಂಬ, ವಡ್ಡರಮಾಡು, ಕಪ್ಪರಮನೆ, ಬ್ರಹ್ಮಗಿರಿ, ಕೊಟ್ಟಗೇರಿ, ಬೇಗೂರು, ಮುಗುಟಗೇರಿ, ಚಿಕ್ಕಮಂಡೂರು, ಕೋಟೂರು, ತೂಚಮಕೇರಿ, ಚಿಕ್ಕಮಂಡೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.



