KSRTC ನೌಕರರು ಹಠ ಮಾಡೋದ್ರಲ್ಲಿ ಅರ್ಥ ಇಲ್ಲ, ಸರ್ಕಾರದ ಪರಿಸ್ಥಿತಿ ಅರ್ಥ ಮಾಡ್ಕೊಳ್ಳಿ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

Share this post :

ಬೆಂಗಳೂರು : ಹಲವು ಬೇಡಿಕೆಗಳನ್ನ ಮುಂದಿಟ್ಟು ಕೆಎಸ್‌ಆರ್‌ಟಿಸಿ ನೌಕರರು ಇಂದಿನಿಂದ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್‌ ಸೂಚಿಸಿತ್ತು. ಆದ್ರೆ ಅದನ್ನೂ ಲೆಕ್ಕಿಸದೆ ನೌಕರರು ಮುಷ್ಕರ ಶುರುಮಾಡಿದ್ದಾರೆ.
ಮುಷ್ಕರದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ಅವರ ಬೇಡಿಕೆಗಳನ್ನ ನಮ್ಮ ಮುಂದಿಡುವುದು ತಪ್ಪಲ್ಲ. ಆದ್ರೆ ಅವ್ರು ಸರ್ಕಾರದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು. ಆಗದಿರೋದನ್ನ ಮಾಡಿ ಅಂತ ಹೇಳೋದಲ್ಲ ಎಂದಿದ್ದಾರೆ.
ನಮಗೆ ನಾಗರಿಕರು ಇಂಪಾರ್ಟೆಂಟ್.‌ ಜನರಿಗೆ ಯಾರೂ ತೊಂದರೆ ಕೊಡಬೇಡಿ. ಕೆಲವು ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆಂದು ಡಿ.ಕೆ. ಶಿವಕುಮಾರ್‌ ಹೇಳಿದರು.

coorg buzz
coorg buzz