ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಮೂಲದವರು. ಇದೀಗ ರಾಷ್ಟ್ರೀಯ ಮಟ್ಟದ ನೀಟ್ (NEET) ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 710 ಅಂಕಗಳನ್ನು ಪಡೆದು ಭಾರತದಲ್ಲಿ 84ನೇ ರ‍್ಯಾಂಕ್ ಮತ್ತು ಕರ್ನಾಟಕ ರಾಜ್ಯದಲ್ಲಿ ಗೌರವಾನ್ವಿತ 7ನೇ ಸ್ಥಾನವನ್ನು ಪಡೆದು ತಮ್ಮ ಗ್ರಾಮ ಹಾಗೂ ಜಿಲ್ಲೆಯ ಹೆಮ್ಮೆಗಾಗಿರುವ ವಿದ್ಯಾರ್ಥಿನಿ ಕೆ. ಜಿ. ನಿಧಿ ಅವರು ತಮ್ಮ ಈ ಅಪಾರ ಶ್ರದ್ಧೆ, ಪರಿಶ್ರಮ ಹಾಗೂ ಕನಸುಗಳನ್ನು ಪೂರೈಸುವ ದೃಢನಿಶ್ಚಯದಿಂದ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿಯಾಗಿ, ತಮ್ಮ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮಾದರಿ ವಿದ್ಯಾರ್ಥಿನಿಯಾಗಿ ಬೆಳೆದ ನಿಮಗೆ ಭವಿಷ್ಯ ಇನ್ನಷ್ಟು ಬೆಳಗಲಿ ಎಂಬ ಆಶಯ ವ್ಯಕ್ತಪಡಿಸಿದರು.