ಮಡಿಕೇರಿ : ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕನ್ನಡ ವೈದ್ಯಕೀಯ ಬರಹಗಾರರ ಸಮಿತಿ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಕೊಡಗಿನ ಹಿರಿಯ ವೈದ್ಯ, ಸಾಹಿತಿ ಡಾ. ಕೆ.ಬಿ. ಸೂರ್ಯಕುಮಾರ್ ಭಾಜನರಾಗಿದ್ದಾರೆ.
ಸೂರ್ಯಕುಮಾರ್ ಅವರು ಬರೆದ ಮಂಗಳಿ ಕೃತಿಗೆ ಡಾ. ಕೆ. ಶ್ಯಾಮ್‌ಪ್ರಸಾದ್ ಶ್ರೇಷ್ಠ ವೈದ್ಯೇತರ ಕೃತಿ ಪ್ರಶಸ್ತಿ ಲಭಿಸಿದೆ. ಕೆ. ಶ್ಯಾಮ್‌ಪ್ರಸಾದ್ ಶ್ರೇಷ್ಠ ವೈದ್ಯ ಕೃತಿ ಪ್ರಶಸ್ತಿಗೆ ಡಾ. ಕೆ.ಎಸ್. ಶ್ರಿಧರ್ ಅವರ ʼಚಿತ್ತ ಚಾಂಚಲ್ಯʼ ಕೃತಿ, ಡಾ. ಸುನಂದಾ ಕುಲಕರ್ಣಿ ಶ್ರೇಷ್ಠ ವೈದ್ಯಕೀಯ ಹಸ್ತಪ್ರತಿ ಪ್ರಶಸ್ತಿಗೆ ಡಾ. ಕೆ.ಎಸ್. ಪವಿತ್ರ ಅವರ ʼಮನೋಲೋಕʼ, ವೈದ್ಯೇತರ ಹಸ್ತಪ್ರತಿ ಪ್ರಶಸ್ತಿಗೆ ಡಾ. ಶಾಂತಲಾ ಅವರ ʼಅನಿರಿಕ್ಷಿತ ಗುರುಗಳುʼ ಕೃತಿ ಭಾಜನವಾಗಿದೆ.



