SSLC ಪಾಸಾದವರಿಗೆ ರೂ.37 ಸಾವಿರಕ್ಕೂ ಹೆಚ್ಚು ಸಂಬಳದ ಜಾಬ್: ಈಗಲೇ ಅಪ್ಲೇ ಮಾಡಿ

Job Vacancies

Share this post :

ನೀವು ಎಸ್‌ಎಸ್‌ಎಲ್‌ಸಿ (SSLC) ಪಾಸಾದವರಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕು ಅಂತ ಇರ್ತಾರೆ. ಆದರೆ ಇಲ್ಲಿದೆ ನೋಡಿ ನಿಮಗೆ ಜಾಬ್‌ ಆಫರ್. ಬ್ಯಾಂಕ್‌ (Bank) ಆಫ್ ಬರೋಡಾವು 500 ಕಚೇರಿ ಸಹಾಯಕರ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಗೆ ಬೇಕಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬ್ಯಾಂಕ್‌ ಆಫ್‌ ಬರೋಡಾವು 500 ಆಫೀಸ್ ಅಸಿಸ್ಟಂಟ್‌ ಹುದ್ದೆಗಳ ನೇಮಕಾತಿಗೆ ಜಾಬ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಜಸ್ಟ್‌ ಎಸ್‌ಎಸ್‌ಎಲ್‌ಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರಿಗೆ ಬರೊಬ್ಬರಿ Rs.19,500 ರಿಂದ 37,815 ವೇತನ ಶ್ರೇಣಿ ಇದೆ. ಎಸ್‌ಎಸ್‌ಎಲ್‌ಸಿ ಪಾಸಾಗಿದ್ದು ಒಂದು ಒಳ್ಳೆಯ ಡೀಸೆಂಟ್‌ ಜಾಬ್‌ ಬೇಕು, 9 ಟು 6 ಉದ್ಯೋಗ ಆದರೂ ಪರವಾಗಿಲ್ಲ, ಸರ್ಕಾರಿ ರಜೆಯಂತೆ ರಜೆ ಅವಕಾಶ ಇರುವ ಉದ್ಯೋಗ ಇದಾಗಿರಬೇಕು ಎಂದು ಆಲೋಚಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈಗಲೇ ಕೆಳಗಿನಂತೆ ಹೆಚ್ಚಿನ ವಿವರಗಳನ್ನು ತಿಳಿದು, ಅರ್ಜಿ ಸಲ್ಲಿಸಿ.

ಬ್ಯಾಂಕ್‌ ಆಫ್ ಬರೋಡಾದ ಕಚೇರಿ ಸಹಾಯಕ ಹುದ್ದೆಗೆ ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 26 ವರ್ಷ ವಯಸ್ಸು ಮೀರಿರಬಾರದು.

ಕಚೇರಿ ಸಹಾಯಕ ಹುದ್ದೆಗಳಿಗೆ ವಿದ್ಯಾರ್ಹತೆ
ಎಸ್‌ಎಸ್‌ಸಿ / ಮೆಟ್ರಿಕ್ಯೂಲೇಷನ್‌ / ಹತ್ತನೇ ತರಗತಿ ಪಾಸ್‌ ಮಾಡಿರಬೇಕು. ಆಯಾ ರಾಜ್ಯದ ಸ್ಥಳೀಯ ಆಡಳಿತ ಭಾಷಾ ಜ್ಞಾನ, ಕೌಶಲ ಅಗತ್ಯ. ಕರ್ನಾಟಕದಲ್ಲಿ ಹುದ್ದೆ ಪಡೆಯಲು ಬಯಸುವವರಿಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು.

ಅಪ್ಲಿಕೇಶನ್‌ ಶುಲ್ಕ
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದವರು, ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ ರೂ.600.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ರೂ.100.

ಅರ್ಜಿ ಸಲ್ಲಿಸುವುದು ಹೇಗೆ?
* ವೆಬ್‌ ವಿಳಾಸ https://ibpsonline.ibps.in/bobapr25/ ಕ್ಕೆ ಭೇಟಿ ನೀಡಿ.
* ವೆಬ್‌ ಪೇಜ್‌ನಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
* ರಿಜಿಸ್ಟ್ರೇಷನ್‌ ನಂಬರ್, ಪಾಸ್‌ವರ್ಡ್‌ ಕ್ರಿಯೇಟ್‌ ನಂತರ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ.

ಕಚೇರಿ ಸಹಾಯಕ ಹುದ್ದೆಗಳಿಗೆ ನೇಮಕ ವಿಧಾನ
* ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್ ಟೆಸ್ಟ್‌ ಮತ್ತು ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.
* 100 ಅಂಕಗಳಿಗೆ 100 ಪ್ರಶ್ನೆಗಳ ಪರೀಕ್ಷೆ ಇರುತ್ತದೆ.
* ಇಂಗ್ಲಿಷ್‌ ಭಾಷೆ, ಸಾಮಾನ್ಯ ಜ್ಞಾನ, ಎಸ್‌ಎಸ್‌ಎಲ್‌ಸಿ ಹಂತದ ಗಣಿತ, ರೀಸನಿಂಗ್ ಕುರಿತ ಪ್ರಶ್ನೆಗಳು ಇರುತ್ತವೆ.