ತೆಲಂಗಾಣ : ಹೈದರಾಬಾದ್‌ನ ಹಾರ್ಟ್ಫುಲ್ನೆಸ್ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ 79ನೇ ದಕ್ಷಿಣ ವಲಯ ಅಂತಾರಾಜ್ಯ ಬ್ಯಾಡ್ಮಿಂಟನ್ 2025 ಸ್ಪರ್ಧೆಯಲ್ಲಿ ಕೊಡಗಿನ ದಿಯಾ ಭೀಮಯ್ಯ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 19 ವರ್ಷದ ಬಾಲಕಿಯರ ಸಿಂಗಲ್ಸ್‌ನಲ್ಲಿ ದ್ವಿತೀಯ ಹಾಗೂ ತಂಡ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಸೆಪ್ಟೆಂಬರ್ 2 ರಿಂದ 5ನೇ ತಾರೀಖಿನವರೆಗೆ ಸ್ಪರ್ಧೆ ನಡೆಯಿತು. ದೇಶದ ವಿವಿಧ ಕಡೆಗಳಿಂದ ಸ್ಪರ್ಧಿಗಳು ಹಾಗೂ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.




