ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ಕಾಲರ್ಶಿಪ್, ಪ್ರತಿಭಾ ಪುರಸ್ಕಾರ ವಿತರಣೆ

Dubai Kodagu Alumni Association

Share this post :

ಸಂಯುಕ್ತ ಅರಬ್ ಸಂಸ್ಥಾನದ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಕೊಡಗಿನ ಹಳೆ ವಿದ್ಯಾರ್ಥಿಗಳ ಸಂಘದ ಅವರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೊಡಗಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಎಲ್ಲಾ ವರ್ಷವು ನೀಡಿ ಬರುವ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಕೊಡಗಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಫೆ.01 ರಂದು ಹೊದವಾಡದಲ್ಲಿರುವ ರಾಫಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ನಡೆಯಿತು.

ಹತ್ತನೇ ತರಗತಿಯಲ್ಲಿ ಕೊಡಗಿಗೆ ಮೊದಲ ಸ್ಥಾನವನ್ನು ಭಾಷಿತ ವಿದ್ಯಾರ್ಥಿನಿ ಪಡೆದರೆ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಯಾನ ಕೊಡಗಿಗೆ ಮೊದಲ ಸ್ಥಾನವನ್ನು ಪಡೆದರೆ ವಾಣಿಜ್ಯ ವಿಭಾಗದಲ್ಲಿ ಚರಿಷ್ಮಾ ಮೊದಲ ಸ್ಥಾನ ಮತ್ತು ಕಲಾ ವಿಭಾಗದಲ್ಲಿ ಹೇಮಾವತಿ ಮೊದಲ ಸ್ಥಾನ ಪಡೆದರೆ ಸಫಾನಾ ಎರಡನೇ ಸ್ಥಾನ ಪಡೆದಿದ್ದರು, ವಿದ್ಯಾರ್ಥಿವೇತನ ಅರ್ಜಿದಾರರಲ್ಲಿ ಫಾಹಿನ ಹೆಚ್ಚು ಅಂಕ ಗಳಿಸಿದ್ದರು, ಕೊಡಗಿಗೆ ಮೊದಲ ಹೆಚ್ಚು ಅಂಕ ಗಳಿಸಿ ಕೊಡಗಿನ ಕೀರ್ತಿಯನ್ನು ಮೇಲೇರಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಕೂರ್ಗ್ ಓಲ್ಡ್ ಸ್ಟುಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡಂಡ ಕುಂಜಿಲ ಅವರು ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್, ಪಾರಿತೋಷಕ ಮತ್ತು ನಗದು ನೀಡಿ ಶಾಲ್ ಹೊದಿಸಿ ಗೌರವಿಸಿದರು, ಹಾಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮತ್ತು ಸರ್ಟಿಫಿಕೇಟ್ ಹಸ್ತಾಂತರಿಸಲಾಯಿತು.

ಕಾರ್ಯಕ್ರಮಕ್ಕೆ ನಾಪೋಕ್ಲು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕುಂಜಿಲ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಾಯರಾದ ಗಂಗಮ್ಮ, ರಾಮ ಟ್ರಸ್ಟ್ ಶಾಲೆಯ ಮುಖ್ಯ ಉಪಾಧ್ಯಾಯರಾದ ಶಾರದಾ ಕಲಿಯಾಟಂಡ, ರಾಫಲ್ಸ್ ಕಾಜೇಜು ಪ್ರಾಂಶುಪಾಲರಾದ ತನ್ವೀರ್, ಬಲ್ಲಮಾವಟಿ ಶಾಲೆಯ ಅಧ್ಯಾಪಕರಾದ ಮೆಹಬೂಬ್ ಮಾಸ್ಟರ್, ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ ಕಾರ್ಯದರ್ಶಿಯಾದ ಬಷೀರ್ ಎಡಪಲ, ಮರ್ಕಜ್ ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮತ್ತು ಆಕ್ಸ್ಫರ್ಡ್ ಶಾಲೆಯ ಮಾಲೀಕರಾದ ಶಾಹಿದ್ ಕೊಟ್ಟಮುಡಿ ಅವರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಮೆಹಬೂಬ್ ಮಾಸ್ಟರ್ ಅವರನ್ನು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರಾಫಲ್ಸ್ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ರಾಜ್ಯ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯವಾಯಿತು, ರಾಫಲ್ಸ್ ಶಾಲೆಯ ಶಿಕ್ಷಕಿ ಆಗಮಿಸಿದ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಇನ್ನೊಬ್ಬರು ಶಿಕ್ಷಕಿ ವಂದನಾರ್ಪಣೆ ಮಾಡಿದರು.