ಶ್ರೀಗಂಧ ಕಳ್ಳಸಾಗಣೆ – ಪತ್ರಕರ್ತ ಸೇರಿ ಇಬ್ಬರ ಬಂಧನ

Share this post :

ಮೂಡಿಗೆರೆ : ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಮೂಡಿಗೆರೆ ವಲಯದ ಅರಣ್ಯಾಧಿಕಾರಿಗಳು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಡಿಗೆರೆ ಪ್ರಾದೇಶಿಕ ವಲಯ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಶ್ರೀಗಂಧ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಯೂಸುಫ್‌ ಹಾಗೂ ಮನ್ಸೂರ್‌ ಎಂಬಿಬ್ಬರು ಬೈಕ್‌ನಲ್ಲಿ ಗಂಧದ ತುಂಡುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರನ್ನು ಅಧಿಕಾರಿಗಳು ಬಂದಿಸಿದ್ದು, ಬೈಕ್, ಶ್ರೀಗಂಧದ ತುಂಡು, ತುಂಡು ಕಡಿಯಲು ಬಳಸಿದ್ದ ಚಿಕ್ಕ ಗರಗಸವನ್ನು ವಶಪಡಿಸಿಕೊಳ್ಳಲಾಗಿದೆ.
ಮನ್ಸೂರ್‌ ಎಂಬಾತ ಪತ್ರಕರ್ತನಾಗಿದ್ದು, ತನ್ನ ಬೈಕ್‌ನಲ್ಲಿ ಪ್ರೆಸ್‌ ಎಂದು ಬರೆಸಿಕೊಂಡಿದ್ದಾನೆ. ಆ ಬೈಕ್‌ ಬಳಸಿ ಈ ರೀತಿ ಅಕ್ರಮದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಹಾಯಕ ಸಂರಕ್ಷಣಾಧಿಕಾರಿ ಆಕರ್ಷ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿಗಳಾದ ಸುಹಾಸ್, ಅಶ್ವಥ್, ಅರಣ್ಯ ರಕ್ಷಕರಾದ ಉಮೇಶ್, ಸುರೇಶ್, ಮನು, ಸುಮ್ಮಂತ್ ಪಾಲ್ಗೊಂಡಿದ್ದರು.

coorg buzz
coorg buzz