ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ CIPUC ಬಾಲಕಿಯರ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ

Share this post :

ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ರನ್ನರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಜಿಲ್ಲಾಮಟ್ಟಕ್ಕೆ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಈ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಪಿ.ಯು.ವಿದ್ಯಾರ್ಥಿನಿಯರಾದ ಎಂ.ಎಸ್.ನಿಶಿತಾ ನೀಲಮ್ಮ, ಫಾತಿಮಾ ರಿಫ಼ಾನ , ತಾನ್ಯ ಕಾವೇರಮ್ಮ ಮತ್ತು ಪ್ರಥಮ ಪಿ.ಯು.ವಿದ್ಯಾರ್ಥಿಯರಾದ ಕೃತಿಕಾ ಎ.ಬಿ , ಇಫ್ರಾ ರಿಫ಼ಾತ್ , ಮೌಲ್ಯ ಜಿ , ಜೋಶ್ನಾ ಸಿ.ಜೆ , ವಂಶಿ ಕಾವೇರಮ್ಮ, ಪ್ರಿಯದರ್ಶಿನಿ ಭಾಗವಹಿಸಿದ್ದರು. ಈ ವಿದ್ಯಾರ್ಥಿನಿಯ ಪೈಕಿ ಫಾತಿಮಾ ರಿಫ಼ಾನ , ತಾನ್ಯ ಕಾವೇರಮ್ಮ ಮತ್ತು ವಂಶಿ ಕಾವೇರಮ್ಮ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.ಇವರನ್ನು ಸಿ.ಐ.ಪಿ.ಯು.ಕಾಲೇಜಿನ ಪ್ರಾಂಶುಪಾಲೆ ಡಾ .ರೋಹಿಣಿ ತಿಮ್ಮಯ್ಯ ಅಭಿನಂದಿಸಿದ್ದರು.

coorg buzz
coorg buzz