ಮಡಿಕೇರಿ : ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ತುಲಾ ಸಂಕ್ರಮಣಕ್ಕೆ ಸರ್ಕಾರ ಜಿಲ್ಲೆಗೆ ಅನ್ವಯಿಸುವಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.
ಈ ಬಾರಿ ಅಕ್ಟೋಬರ್ 17ರ ಮಧ್ಯಾಹ್ನ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿರುವ ಕಾರಣ ಅದೇ ದಿನ ರಜೆ ಘೋಷಿಸಲಾಗಿದೆ. ಈ ಮೊದಲು ಆದೇಶದಲ್ಲಿ 18-10-2025 ಶನಿವಾರ ರಜೆ ಎಂದು ಸರ್ಕಾರ ಘೋಷಿಸಿತ್ತು. ಇದೀಗ ಆ ಆದೇಶವನ್ನು ಪರಿಷ್ಕರಿಸಿ 17ರಂದು ರಜೆ ಘೋಷಿಸಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಅವರ ಕಚೇರಿ ಪ್ರಕಟಣೆ ತಿಳಿಸಿದೆ.



