ನಿವೃತ್ತ ಶಿಕ್ಷಕಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಗೌರವದ ಸನ್ಮಾನ

Share this post :

ಗೋಣಿಕೊಪ್ಪ : ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಶಿಕ್ಷಕಿ ಪೂದ್ರಿಮಾಡ ತಾರಾ ಪ್ರಕಾಶ್‌ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಗೊಟ್ಟಡ ಕಳತ್ಮಾಡುವಿನ ಶ್ರೀ ಅಯ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಸೇವಾ ಸಂಘದವ ವತಿಯಿಂದ 27ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ತಾರಾ ಪ್ರಕಾಶ್‌ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಗ್ರಾಮಸ್ಥರು, ವಿದ್ಯಾರ್ಥಿಗಳು, ತಾರಾ ಪ್ರಕಾಶ್‌ ಅವರ ಶಿಷ್ಯ ವೃಂದ ಈ ಸಂದರ್ಭ ಉಪಸ್ಥಿತರಿದ್ದರು.

coorg buzz
coorg buzz