ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿ ʼಸು ಫ್ರಂ ಸೋʼ ಹಲವು ದಾಖಲೆಗಳನ್ನ ನಿರ್ಮಿಸುತ್ತಾ ಯಶಸ್ಸಿನ ಓಟ ಮುಂದುವರೆಸಿದೆ. 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಚಿತ್ರ ಈಗ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟದಲ್ಲಿಯೂ ದಾಖಲೆ ನಿರ್ಮಿಸಿದೆ.
ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಪ್ರಸಾರ ಹಕ್ಕನ್ನು ಕಲರ್ಸ್ ಮತ್ತು ಹಾಟ್‌ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ. ಬರೋಬ್ಬರಿ ಐದೂವರೆ ಕೋಟಿ ರೂಪಾಯಿಗೆ ಹಕ್ಕು ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಭಾರತದ ಎಲ್ಲಾ ಭಾಷೆಯ ಹಕ್ಕು ಖರೀದಿಯಾಗಿದ್ದು, ಕಲರ್ಸ್ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ. ನಂತರ ಕೆಲವೇ ದಿನಗಳಲ್ಲಿ ಹಾಟ್‌ಸ್ಟಾರ್ ಓಟಿಟಿಯಲ್ಲಿ ಪ್ರಸಾರವಾಗಲಿದೆ. ಒಟಿಟಿ ರೈಟ್ಸ್ ಬಗ್ಗೆ ಸಿನೆಮಾ ಬಿಡುಗಡೆಗೆ ಮೊದಲು ಬೇರೊಂದು ವಾಹಿನಿಗೆ ಚಿತ್ರ ತೋರಿಸಿತ್ತು ಈ ತಂಡ. ಆದರೆ ಸಿನೆಮಾ ಬಿಡುಗಡೆಯ ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸೋಣ ಅಂತ ಹೇಳಿದ್ದರಂತೆ. ಇದೀಗ ಆ ಅವಕಾಶ ಅವರಿಂದ ತಪ್ಪಿದಂತಾಗಿದೆ.



