ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ – ರಾಜ್ಯಾಧ್ಯಕ್ಷರಿಂದ ಆದೇಶ ಪ್ರತಿ ಸ್ವೀಕಾರ..!

Share this post :

ಮಡಿಕೇರಿ : ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮರು ನೇಮಕವಾದ ನಾಪಂಡ ರವಿ ಕಾಳಪ್ಪ ಇಂದು ರಾಜ್ಯಾಧ್ಯಕ್ಷರಿಂದ ಅಧಿಕೃತ ಆದೇಶ ಪ್ರತಿ ಸ್ವೀಕರಿಸಿದರು.

ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ ಬಿ.ವೈ. ವಿಜಯೇಂದ್ರ ಆದೇಶ ಪ್ರತಿ ನೀಡಿದರು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಕ್ಯಾ. ಗಣೇಶ ಕಾರ್ಣಿಕ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ‌ ಪಿ. ರಾಜೀವ, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ರಾಜ್ಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

coorg buzz
coorg buzz