ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ತುಸು ಬಿರುಸು – ಆತಂಕದಲ್ಲಿ ಗಣೇಶೋತ್ಸವ ಸಮಿತಿಗಳು..!

Share this post :

ಮಡಿಕೇರಿ : ಕೆಲವು ದಿನದಿಂದ ವಿರಾಮ ನೀಡಿದ್ದ ಮಳೆರಾಯ ಮತ್ತೆ ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದಾನೆ. ಮಡಿಕೇರಿ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಮಳೆ ಬಿರುಸುಗೊಂಡಿದೆ.
ಗೌರಿ ಹಬ್ಬದ ದಿನ ಮಳೆಯಾಗಮನ ಶುಭ ಸಂಕೇತ ಅಂತ ಅನೇಕರು ನಂಬಿದ್ದಾರೆ. ಈ ನಡುವೆ ನಾಳೆಯ ಗಣೇಶೋತ್ಸವ ಸಂಭ್ರಮಕ್ಕೆ ವರುಣ ದೇವ ಅಡ್ಡಿಯಾಗದಿರಲಿ ಅಂತ ಜನ ಬೇಡಿಕೊಳ್ಳುತ್ತಿದ್ದಾರೆ. ಸಂಭ್ರಮದ ಉತ್ಸವಕ್ಕೆ ವಿವಿಧ ಸಮಿತಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾವೆ. ಹೀಗಿರುವಾಗ ಇಂದು ಮಳೆಯಾಗಿರುವುದು ಸಹಜವಾಗಿ ಆತಂಕಕಕ್ಕೆ ಕಾರಣವಾಗಿದೆ.

coorg buzz
coorg buzz