ಮಡಿಕೇರಿ ತಾಲೂಕು ಕಟ್ಟೆ ಮಾಡು (Kattemadu) ದೇವಾಲಯದಲ್ಲಿ ಈ ಹಿಂದೆ ನಡೆದ ಘಟನೆಯ ಸಂಬಂಧವಾಗಿ ಮೃತ್ಯುಂಜಯ ದೇವಾಲಯದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 14 ರಿಂದ ಏಪ್ರಿಲ್ 11 ರವರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ, ಪ್ರತಿಭಟನೆ ರ್ಯಾಲಿ,ಜಾತ, ಪ್ರಚೋದಾತ್ಮಕ ಘೋಷಣೆಗಳನ್ನು ಕೂಗದಂತೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಹಿರಿಯ ಉಪ ವಿಭಾಗಾಧಿಕಾರಿಗಳಾದ ವಿನಾಯಕ ನರ್ವಾಡೆ ರವರು ದಿನಾಂಕ 14.03.2025 ರಂದು ಆದೇಶ ಹೊರಡಿಸಿದ್ದಾರೆ.
