ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕೊಡಗಿನ ಪ್ರೇಕ್ಷಾ

India Book of Records

Share this post :

coorg buzz

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಯ ವಿರಳಾತಿ ವಿರಳರಲ್ಲಿ ಎಚ್.ಪ್ರೇಕ್ಷಾ ಸಹ ಒಬ್ಬಳು. ಸೋಮವಾರಪೇಟೆ ತಾಲ್ಲೂಕಿನ ಅಟ್ಟೂರುಕಟ್ಟೆ ಗ್ರಾಮದ ಗುತ್ತಿಗೆದಾರ ಹರೀಶ್ ಹಾಗೂ ಸಿಂಧು ಅವರ ಪುತ್ರಿಯಾದ ಎಚ್.ಪ್ರೇಕ್ಷಾ 4ನೇ ತರಗತಿ ವಿದ್ಯಾರ್ಥಿನಿ. ಈಕೆ ಈ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ಮಹಾಭಾರತದಲ್ಲಿ ಬರುವ 101 ಕೌರವರ ಹೆಸರನ್ನು 54 ಸೆಕೆಂಡ್‌ನಲ್ಲಿ ಹೇಳುವ ಮೂಲಕ ಈ ವಿಷಯದಲ್ಲಿ ಈ ಹಿಂದೆ ಇದ್ದ ದಾಖಲೆಯನ್ನು ಮುರಿದಿದ್ದಾಳೆ. ಈ ಹಿಂದೆ ಕೇರಳದ ಬಾಲಕನೊಬ್ಬ ಇದೇ ಹೆಸರುಗಳನ್ನು ಹೇಳಲು ತೆಗೆದುಕೊಂಡಿದ್ದು 1 ನಿಮಿಷ 30 ಸೆಕೆಂಡ್‌ಗಳು. ಈಗ ಈ ದಾಖಲೆ ಪ್ರೇಕ್ಷಾ ಹೆಸರಿನಲ್ಲಿದೆ. ದುರ್ಯೋಧನ, ದುಶ್ಯಾಸನ, ದುಃಸಳ, ದುಃಶಳ, ಜಲಸಂಘ,ಸಮ, ಸಹ, ವಿಂದ, ಅನುವಿಂದ, ಸುಬಾಹು… ಹೀಗೆ ಕೊನೆಯಲ್ಲಿ ದುಃಶಿಲಾ ಹೆಸರನ್ನು ಹರಳು ಹುರಿದಂತೆ ಚಟಪಟನೆ ಹೇಳುವ ಈಕೆ ನೋಡುಗರನ್ನು ನಿಬ್ಬೆರಗುಗೊಳಿಸುತ್ತಾಳೆ.