ಬಜರಂಗದಳ ಜಿಲ್ಲಾ ಸಂಯೋಜಕ ಸ್ಥಾನಕ್ಕೆ ಪ್ರವೀಣ್‌ ರಾಜೀನಾಮೆ – ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವುದಿಲ್ಲ ಎಂದ ಯುವ ನಾಯಕ..!

Share this post :

coorg buzz

Coorg Buzz ಸಿದ್ದಾಪುರ : ಬಜರಂಗದಳದ ಜಿಲ್ಲಾ ಸಂಯೋಜಕ ಸ್ಥಾನಕ್ಕೆ ಪ್ರವೀಣ್‌ ಸಿದ್ದಾಪುರ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನನ್ನ ವೈಯುಕ್ತಿಕ ಕಾರಣಗಳಿಂದಾಗಿ ಕಳೆದ ಕೆಲವು ಸಮಯಗಳಿಂದ ಬಜರಂಗದಳದ ಕೊಡಗು ಜಿಲ್ಲಾ ಸಂಯೋಜಕ ಜವಾಬ್ದಾರಿಯನ್ನು ನನಗೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಡಗು ಜಿಲ್ಲಾ ಬಜರಂಗದಳದ ಜವಾಬ್ದಾರಿಯಿಂದ ಸ್ವಯಂ ಮುಕ್ತಿಗೊಳ್ಳುತ್ತಿದ್ದೇನೆ. ಮುಂದೆ ಸಾಮಾಜಿಕ ಕೆಲಸ ಮಾಡುತ್ತೇನೆ ಹೊರತು ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪಕ್ಷ ಹಾಗೂ ಸಂಘಟನೆಯ ನಾಯಕರ ವರ್ತನೆಯಿಂದ ಬೇಸರಗೊಂಡು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆಂದು ಅವರ ಆಪ್ತರು ಹೇಳುತ್ತಿದ್ದಾರೆ. ಆದರೆ ಅಸಲಿ ಕಾರಣ ಏನು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.